ಕನ್ನಡಿಗರನ್ನು ‘ಹರಾಮಿ’ಗಳೆಂದ ಗೋವಾ ಸಚಿವ; ತಪ್ಪಿನ ಅರಿವಾದಕ್ಷಣ ಹೇಳಿಕೆ ಹಿಂದೆ

First Published 14, Jan 2018, 3:18 PM IST
Mahadayi row Goa minister abuses Kannada people requests media to expunge word
Highlights
  • ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹರಿಹಾಯ್ದ ಗೋವಾ ಸಚಿವ ವಿನೋದ್ ಪಾಲೇಂಕರ್
  • ತನ್ನ ತಪ್ಪಿನ ಅರಿವಾದಕ್ಷಣವೇ ಹೇಳಿಕೆ ಹಿಂದೆ

ಪಣಜಿ: ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹರಿಹಾಯ್ದಿರುವ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಂಕರ್, ಕನ್ನಡಿಗರನ್ನು ‘ಹರಾಮಿ’ಗಳೆಂದು ಕರೆದಿದ್ದಾರೆ. ಬಳಿಕ ತನ್ನ ತಪ್ಪಿನ ಅರಿವಾದಕ್ಷಣವೇ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಉತ್ತರ ಕರ್ನಾಟಕದ ಕಂಕುಂಬಿ ಪ್ರದೇಶಲ್ಲಿ ಮಹದಾಯಿ ನೀರು ತಿರುಗಿಸುವ ಸ್ಥಳಕ್ಕೆ ಶನಿವಾರ ಪೊಲೀಸ್ ಭದ್ರತೆಯೊಂದಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಪಾಲೇಂಕರ್, ‘ಇವರು ಹರಾಮಿಗಳು, ಏನು ಬೇಕಾದರೂ ಮಾಡಬಹುದು’ ಎಂದಿದ್ದಾರೆ.

ತಪ್ಪಿನ ಅರಿವಾಗುತ್ತಿದ್ದಂತೆ, ಭಾವಾವೇಶದಲ್ಲಿ ಆ ಪದ ಬಳಸಿರುವುದಾಗಿಯೂ, ಅದನ್ನು ನಿರ್ಲಕ್ಷಿಸಲು ಮನವಿ ಮಾಡಿಕೊಂಡಿದ್ದಾರೆ.

ಮಹದಾಯಿ ವಿಚಾರದಲ್ಲಿ ಕರ್ನಾಟಕ ಚಿಲ್ಲರೆ ರಾಜಕೀಯ ಮಾಡುತ್ತಿದೆ. ನಾವು ಮಾನವೀಯ ನೆಲೆಯಲ್ಲಿ ಕುಡಿಯಲು ನೀರು ಕೊಡುವುದಾಗಿ ಯಡಿಯೂರಪ್ಪರಿಗೆ ಪತ್ರ ಬರೆದಿದ್ದರೂ ಅದನ್ನು ಸರ್ಕಾರ ಪರಿಗಣಿಸುತ್ತಿಲ್ಲವೆಂದು ಹರಿಹಾಯ್ದಿದ್ದಾರೆ.

loader