ಮಹದಾಯಿ ವಿವಾದದ ಬಗ್ಗೆ ನ್ಯಾಯಾಧಿಕರಣದಲ್ಲಿ ವಾದಿಸುತ್ತಿರುವ ಗೋವಾ ಪರ ವಕೀಲರಾದ ಆತ್ಮಾರಾಂ ನಾಡಕರ್ಣಿ ದಿ ನವಹಿಂದ್ ಟೈಮ್ಸ್'ಗೆ ಕೊಟ್ಟ ಸಂದರ್ಶನದ ಆಯ್ದ ಭಾಗ
ಮಹದಾಯಿ ವಿವಾದದ ಬಗ್ಗೆ ನ್ಯಾಯಾಧಿಕರಣದಲ್ಲಿ ವಾದಿಸುತ್ತಿರುವ ಗೋವಾ ಪರ ವಕೀಲರಾದ ಆತ್ಮಾರಾಂ ನಾಡಕರ್ಣಿ ದಿ ನವಹಿಂದ್ ಟೈಮ್ಸ್'ಗೆ ಕೊಟ್ಟ ಸಂದರ್ಶನದ ಆಯ್ದ ಭಾಗ
ಗೋವಾಕ್ಕೆ ಹರಿಯುವ ಮಹದಾಯಿ ನೀರಿಗೆ ಅಡ್ಡಿಪಡಿಸದೆ ಕರ್ನಾಟಕದಲ್ಲಿ ಅದನ್ನು ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಸಾಧ್ಯವಿದೆಯೇ?
ಮಹದಾಯಿ ನದಿ ಕರ್ನಾಟಕದಲ್ಲಿ 36 ಕಿ.ಮೀ. ಹರಿಯುತ್ತದೆ. ಹಾಗಾಗಿ ಆ ಭಾಗದಲ್ಲಿ ವಾಸಿಸುವ ಜನರಿಗೆ ನದಿಯ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಹಕ್ಕಿದೆ. ಆದರೆ, ಅಷ್ಟು ಪ್ರದೇಶದಲ್ಲಿ ವಾಸಿಸುವ ಜನರಿಗೆ ಕುಡಿಯಲು ಎಷ್ಟು ನೀರು ಬೇಕು? ಒಂದಿಡೀ ವರ್ಷಕ್ಕೆ ಅವರಿಗೆ 0.1 ಟಿಎಂಸಿ ನೀರು ಬೇಕಾಗುತ್ತದೆ. ಅದಕ್ಕೆ ಗೋವಾ ದಿಂದ ಯಾವ ತಕರಾರೂ ಇಲ್ಲ. ಕುಡಿಯಲು ಎಷ್ಟು ಬೇಕಾದರೂ ನೀರು ಬಳಸಿಕೊಳ್ಳಬಹುದು ಎಂದು ನಾವು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ಹೇಳಿಕೆಯಲ್ಲೇ ಸ್ಪಷ್ಟಪಡಿಸಿದ್ದೇವೆ. ಹಾಗೆ ನೋಡಿದರೆ, ಕರ್ನಾಟಕ ದವರು ನೀರಾವರಿಯ ಉದ್ದೇಶಕ್ಕೆ ಮಹದಾಯಿ ನೀರು ಬಳಸಿಕೊಂಡ ರೂ ಅದಕ್ಕೆ 0.3 ಟಿಎಂಸಿ ಸಾಕು. ಸಮಸ್ಯೆ ಬಂದಿರುವುದು ಎಲ್ಲಿ ಅಂದರೆ, ಕರ್ನಾಟಕದವರು 24 ರಿಂದ 25 ಟಿಎಂಸಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ ಮಲಪ್ರಭಾ ನದಿಗೆ ಹರಿಸಲು ಮುಂದಾಗಿದ್ದಾರೆ. ಮಲಪ್ರ ಭಾ ನದಿ ಪಾತ್ರವೇ ಬೇರೆ ಮಹದಾಯಿ ನದಿ ಪಾತ್ರವೇ ಬೇರೆ. ಹಾಗಾಗಿ ಇದು ಅಂತರ-ಪಾತ್ರ ನೀರಿನ ತಿರುವು ಯೋಜನೆಯಾಗುತ್ತದೆ. ?
ಉತ್ತರ ಕರ್ನಾಟಕ ಭಾಗಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಕಡ್ಡಾಯವಾಗಿ ಬಳಸಿಕೊಳ್ಳುವುದಾದರೆ ಅಷ್ಟು ಪ್ರಮಾಣದ ಹೆಚ್ಚುವರಿ ನೀರು ಮಹದಾಯಿಯಲ್ಲಿ ಇದೆಯೇ?
ಮಹದಾಯಿ ನದಿ ಯಾವತ್ತೂ ಮಿಗತೆ ನೀರಿನ ನದಿಯಲ್ಲ. ಇದು ಕೊರತೆ ನೀರಿನ ನದಿ. ರಾಷ್ಟ್ರೀಯ ನೀರಿನ ಅಭಿವೃದ್ಧಿ ಏಜೆನ್ಸಿಯು ನಮ್ಮ ದೇಶದಲ್ಲಿ ಯಾವ್ಯಾವ ನದಿಗಳು ಮಿಗತೆ ನೀರು ಹೊಂದಿವೆ ಎಂ ಬುದನ್ನು ಗುರುತಿಸಿದೆ. ಅವುಗಳಲ್ಲಿ ಮಹದಾಯಿ ಸೇರಿಲ್ಲ. ಇದು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ನದಿಯಾಗಿರುವುದರಿಂದ ಯಾವತ್ತೂ ಹೆಚ್ಚುವರಿ ನೀರು ಸಿಗುವ ನದಿಯಾಗಲು ಸಾಧ್ಯವಿಲ್ಲ. ಅಷ್ಟಾಗಿಯೂ, ಕರ್ನಾಟಕದವರು ಮಹದಾಯಿ ನೀರನ್ನು ಕುಡಿಯು ವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವುದಾದರೆ ನಾನು ಮೊದಲೇ ಹೇಳಿ ದಂತೆ 0.1 ಟಿಎಂಸಿ ಸಾಕು. ಅಷ್ಟು ನೀರನ್ನು ಕರ್ನಾಟಕಕ್ಕೆ ಕೊಡಲು ಯಾವುದೇ ತೊಂದರೆಯಿಲ್ಲ. ಆದರೆ, ಕರ್ನಾಟಕದವರು 7.56 ಟಿಎಂಸಿ ನೀರು ತಮಗೆ ಕುಡಿಯುವ ಉದ್ದೇಶಕ್ಕೆ ಬೇಕು ಎನ್ನುತ್ತಿದ್ದಾರೆ. ಅದು ಬೋಗಸ್ ಮತ್ತು ನಕಲಿ ಬೇಡಿಕೆ. ನೀರಾವರಿ ಉದ್ದೇಶಕ್ಕಾಗಿ ಅವರು ಅಷ್ಟೊಂದು ನೀರು ಕೇಳುತ್ತಿದ್ದಾರೆ. ಅದೂ ಕೂಡ ಉತ್ಪ್ರೇಕ್ಷಿತ ಬೇಡಿಕೆ. ?
ಮಹದಾಯಿ ನೀರನ್ನು ಎರಡೂ ರಾಜ್ಯದವರು ಹಂಚಿಕೊಳ್ಳಬೇಕು ಎಂಬ ನಿರ್ಧಾರ ಏರ್ಪಟ್ಟರೆ ಅದರ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ಹೇಗಿರುತ್ತದೆ? ಏಕೆಂದರೆ ಕರ್ನಾಟಕದವರು ಹೆಚ್ಚು ನೀರು ಬಳಸಿಕೊಳ್ಳುವ ಸಾಧ್ಯತೆಯಿದೆ. ಮೊದಲಿನಿಂದಲೂ ಅವರು ಅದನ್ನೇ ಮಾಡುತ್ತ ಬಂದಿದ್ದಾರೆ.
ಅದು ನಿಜ. ಈ ವಿಷಯದಲ್ಲಿ ಆ ರಾಜ್ಯ ಪದೇಪದೇ ತಪ್ಪು ಮಾಡುತ್ತ ಬಂದಿದೆ. ಅಂತಹದ್ದೊಂದು ಇತಿಹಾಸವೇ ಕರ್ನಾಟಕಕ್ಕಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಕೂಡ ಆ ರಾಜ್ಯ ಉಲ್ಲಂಘಿಸಿತ್ತು. ಹಾಗಾಗಿ ನೀರಿನ ಹಂಚಿಕೆ ಆಗಬೇಕಿದ್ದರೆ ಅದರ ಮೇಲ್ವಿಚಾರಣೆಯು ಜಂಟಿ ಮಂಡಳಿಯ ಮೂಲಕವೇ ಆಗಬೇಕು. ಇಂತಹ ವ್ಯವಸ್ಥೆ ರಾವಿ- ಬಿಯಾಸ್ ನದಿ ನೀರಿನ ಹಂಚಿಕೆಗಾಗಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ನಡುವೆ ಇದೆ. ಎಲ್ಲೆಡೆಯೂ ಇಂತಹ ಜಂಟಿ ಮಂಡಳಿಯೇ ಇದೆ. ಆಗ ಗೋವಾ ಕೂಡ ಈ ಮಂಡಳಿಯ ಒಂದು ಭಾಗವಾಗಬಹುದು. ?
ಕರ್ನಾಟಕ ಏನು ಮಾಡಲು ಹೊರಟಿದೆ? ನೀವು ಮಹದಾಯಿ ನ್ಯಾಯಾಧಿಕರಣದಲ್ಲಿ ಆ ರಾಜ್ಯದ ವಿರುದ್ಧ ಮಾಡುತ್ತಿರುವ ವಾದ ಏನು?
ಕರ್ನಾಟಕ ಸರ್ಕಾರ ಮಹದಾಯಿ ನದಿಗೆ 8 ಅಣೆಕಟ್ಟು ಕಟ್ಟಲು ಹೊರಟಿದೆ. ಅವುಗಳಲ್ಲಿ ಹಲ್ತರ್‌ನಾಲಾ ಮತ್ತು ಕಳಸಾ-ಬಂಡೂರಿ ನಾಲೆಗಳನ್ನು ನಿರ್ಮಿಸಿದರೂ ಸಾಕು, ನಮ್ಮ ಸುರ್ಲಾ ಜಲಪಾತ ಹಾಗೂ ದೂದ್‌ಸಾಗರ ಜಲಪಾತಗಳು ಬತ್ತುತ್ತವೆ. ಅಷ್ಟೇ ಅಲ್ಲ, ಖಾಂಡೇಪರ್ ನದಿಗೆ ಬರುವ ನೀರು ಕಡಿಮೆಯಾಗುತ್ತದೆ. ಕರ್ನಾ ಟಕದವರು ಕೊಟ್ನಿ ಡ್ಯಾಂ ಕಟ್ಟಿದರೆ ಗೋವಾಕ್ಕೆ ಮಹದಾಯಿ ನೀರೇ ಬರುವುದಿಲ್ಲ. ಸಂಪೂರ್ಣ ನಿಂತುಹೋಗುತ್ತದೆ. ಮಹದಾಯಿ ವರ್ಷ ಪೂರ್ತಿ ತುಂಬಿ ಹರಿಯುವ ನದಿಯಲ್ಲ. ಇದು ಮಳೆಗಾಲದ ನದಿ. ಆದರೆ, ಗೋವಾದಲ್ಲಿ ಯಾವತ್ತೂ ಇದು ಬತ್ತುವುದಿಲ್ಲ. ಕರ್ನಾಟಕದ ಭೀಮಗಢ ವನ್ಯಜೀವಿಧಾಮದಲ್ಲಿ ಹುಟ್ಟುವ ಈ ನದಿ ಕರ್ನಾಟಕ ರಾಜ್ಯದಲ್ಲಿ ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ಇದನ್ನೆಲ್ಲ ಅವರು ನಿಲ್ಲಿಸಲು ಹೊರಟಿದ್ದಾರೆ. ನಾವು ವಿರೋಧಿಸುತ್ತಿರುವುದೂ ಇದನ್ನೇ. ನಮ್ಮ 2 ನೇ ಆಕ್ಷೇಪ ಇರುವುದು ನೀರಿನ ಬಳಕೆಯ ಬಗ್ಗೆ. ಕರ್ನಾಟಕದವರು ಕಟ್ಟಲಿರುವ ಕೆಲ ಡ್ಯಾಮ್‌ಗಳು ಜಲವಿದ್ಯುತ್ ಉತ್ಪಾದನೆಯ ಉದ್ದೇಶ ಹೊಂದಿವೆ. ಹಾಗೆಯೇ, ಮಹದಾಯಿ ನದಿ ಯ ಪಾತ್ರವೇ ಅಲ್ಲದ ಹುಬ್ಬಳ್ಳಿ-ಧಾರವಾಡಕ್ಕೂ ಈ ನೀರು ತಿರುಗಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ, ಒಂದಷ್ಟು ನೀರನ್ನು ಮಲಪ್ರಭಾ ಜಲಾಶಯಕ್ಕೆ ಪಂಪ್ ಮಾಡಲು ಕರ್ನಾಟಕ ಮುಂದಾಗಿದೆ. ಏಕೆಂದರೆ ಮಲಪ್ರಭಾ ನದಿಯ ನೀರಿನಿಂದ ಈ ಡ್ಯಾಂ ತುಂಬುತ್ತಿಲ್ಲ. ಹಾಗಾಗಿ ಮಹದಾಯಿ ನೀರು ತೆಗೆದುಕೊಂಡು ಹೋಗಿ ತುಂಬಿಸಲು ನೋಡುತ್ತಿ ದ್ದಾರೆ. ನಮ್ಮ ಮೂಲಭೂತ ಪ್ರಶ್ನೆಯೆಂದರೆ ಕರ್ನಾಟಕದವರು ಮಹದಾಯಿ ನದಿಗೆ ೮ ಡ್ಯಾಂ ಕಟ್ಟಲು ಅವಕಾಶ ನೀಡಬೇಕೆ? ಖಂಡಿತ ಇಲ್ಲ. ಈ ವಿಷಯದಲ್ಲಿ ಮಾತುಕತೆ ಕೂಡ ನಡೆಸಲು ಸಾಧ್ಯವಿಲ್ಲ. ಈ ೮ ಡ್ಯಾಂ ಕಟ್ಟಿದರೆ ಗೋವಾದ ಪಾಲಿಗೆ ಇಡೀ ಮಹದಾಯಿ (ಮಾಂಡೋವಿ) ನದಿಯೇ ಬತ್ತಿಹೋದಂತಾಗುತ್ತದೆ. ?
ಕುಡಿಯುವ ಉದ್ದೇಶಕ್ಕೆ ಮಹದಾಯಿ ನೀರು ಬಳಸಿಕೊಳ್ಳುವುದರ ಕುರಿತು ಮಾತುಕತೆಗೆ ನಾನು ಸಿದ್ಧ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪರ್ರಿಕರ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರವನ್ನೇ ಮಹದಾಯಿ ನ್ಯಾಯಾಧಿಕರಣಕ್ಕೆ ಕರ್ನಾಟಕ ಸಿಎಂ ಸಲ್ಲಿಸಬೇಕು ಎಂಬ ವಾದ ಆ ರಾಜ್ಯದಲ್ಲಿ ಕೇಳಿ ಬರುತ್ತಿದೆ. ನ್ಯಾಯಾಧಿಕರಣದಲ್ಲಿ ಆ ಪತ್ರಕ್ಕೆ ಬೆಲೆಯಿದೆಯೇ?
ಈ ಪತ್ರಕ್ಕೆ ನ್ಯಾಯಾಧಿಕರಣದಲ್ಲಿ ಯಾವುದೇ ಬೆಲೆ ಸಿಗುವುದಿಲ್ಲ ಎಂದು ಸ್ವತಃ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇಷ್ಟಕ್ಕೂ ಆ ಪತ್ರ ‘ಮಾತು ಕೊಡುವ’ ಪತ್ರವಲ್ಲ. ಮಹ ದಾಯಿ ಪಾತ್ರದಿಂದ ಹೊರಗೆ ನೀರು ಕೊಂಡೊಯ್ಯುವುದಕ್ಕೆ ಗೋವಾ ದ ಸ್ಪಷ್ಟ ವಿರೋಧವಿದೆ ಎಂದೇ ಪತ್ರದಲ್ಲಿ ಪರ‌್ರಿಕರ್ ಹೇಳಿದ್ದಾರೆ. ಅದರ ಜೊತೆಗೆ, ಕುಡಿಯುವ ನೀರು ಪೂರೈಕೆ ಬಗ್ಗೆ ಬೇಕಾದರೆ ಕುಳಿತು ಚರ್ಚಿ ಸೋಣ ಎಂದೂ ಹೇಳಿದ್ದಾರೆ. ಹಾಗಾಗಿ ನ್ಯಾಯಾಧಿಕರಣದಲ್ಲಿ ಪರ‌್ರಿ ಕರ್ ಅವರ ಈ ಪತ್ರದಿಂದ ಏನೂ ವ್ಯತ್ಯಾಸವಾಗುವುದಿಲ್ಲ. ನ್ಯಾಯಾ ಧಿಕರಣದಲ್ಲಿರುವ ಪ್ರಕರಣ ಏನು? ಮಹದಾಯಿ ವಿಷಯದಲ್ಲಿ ಮಾತುಕತೆ ಸಾಧ್ಯವಿಲ್ಲ ಎಂದು ಗೋವಾ ಖಡಾಖಂಡಿತವಾಗಿ ಹೇಳಿ ರುವ ವಿಷಯಕ್ಕೆ ಸಂಬಂಧಿಸಿದ ಪ್ರಕರಣವದು. ನಾವು ೮ ಡ್ಯಾಂ ಕಟ್ಟು ವುದಿಲ್ಲ ಮತ್ತು ಬೇರೆ ನದಿ ಪಾತ್ರಕ್ಕೆ ಮಹದಾಯಿ ನೀರು ಕೊಂಡೊ ಯ್ಯುವುದಿಲ್ಲ ಎಂದು ಕರ್ನಾಟಕ ಹೇಳಿಕೆ ನೀಡಲಿ. ಅಲ್ಲಿಗೆ ಪ್ರಕರಣ ಮುಗಿಯಿತು. ನದಿಯ ಪಾತ್ರದಲ್ಲಿ ಕುಡಿಯುವ ಉದ್ದೇಶಕ್ಕೆ ಅವರು ಎಷ್ಟು ಬೇಕಾದರೂ ನೀರು ಬಳಸಿಕೊಳ್ಳಲಿ. ಈ ನೀರಿನಲ್ಲಿ ಶೇ.೧೦ರಷ್ಟು ನೀರು ಮರಳಿ ಅದೇ ನದಿಗೆ, ಶೇ.೨೦ರಷ್ಟು ನೀರು ಅಂತರ್ಜಲವಾಗು ವುದರಿಂದ ಶೇ.೩೦ರಷ್ಟು ನೀರು ನಮಗೇ ಮರಳಿ ಸಿಕ್ಕಂತಾಗುತ್ತದೆ. ?
ಮಲಪ್ರಭಾ ನೀರನ್ನು ಕಬ್ಬು ಬೆಳೆಯಲು ಅತಿಯಾಗಿ ಬಳಸಿದ್ದರ ಪರಿಣಾಮ ಈಗ ಉತ್ತರ ಕರ್ನಾಟದ ನೀರಾವರಿಗೆ ನೀರು ಸಿಗದಂತಾಗಿದೆ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆ ಕರ್ನಾಟಕದ್ದೇ ಸ್ವಯಂ ಸೃಷ್ಟಿಯೇ?
ಖಂಡಿತ ಹೌದು. ಆ ಭಾಗದಲ್ಲಿ ಕಬ್ಬಿನ ಬೆಳೆ 2 ಲಕ್ಷ ಹೆಕ್ಟೇರ್‌ನಿಂದ 26 ಲಕ್ಷ ಹೆಕ್ಟೇರ್‌ಗೆ ಹೆಚ್ಚಾಗಿದೆ. ಅದು 75 ಲಕ್ಷ ಹೆಕ್ಟೇರ್‌ಗೆ ಹೆಚ್ಚುವ ಸಾಧ್ಯತೆ ಯೂ ಇದೆ. ಮಲಪ್ರಭಾ ಅಣೆ ಕಟ್ಟೆಯ ಸಾಮರ್ಥ್ಯ 47 ಟಿಎಂಸಿ. ಆದರೆ, ಅದರಲ್ಲಿ 27 ಟಿಎಂಸಿಯಷ್ಟೂ ನೀರು ಸಂಗ್ರಹವಾಗುತ್ತಿಲ್ಲ. ಇದಕ್ಕೇಲ್ಲಾ ಯಾರು ಜವಾಬ್ದಾರರು? ಅಲ್ಲಿರುವ ಬೆಣ್ಣಿಹಳ್ಳ ನಾಲೆ ಮಹದಾಯಿ ನದಿಗಿಂತ 3 ಪಟ್ಟು ದೊಡ್ಡದು. ಆ ನಾಲೆಯಿಂದ ಏಕೆ ನೀರು ಬಳಸಿಕೊಳ್ಳುತ್ತಿಲ್ಲ? ಅದು ಮಲಪ್ರಭಾ ಪಾತ್ರದಲ್ಲೇ ಇದೆ. ಆದರೆ, ಕರ್ನಾಟಕ ಸರ್ಕಾರ ಈ ನೀರನ್ನು ಪೆಪ್ಸಿಕೋ ಮುಂತಾದ ದೊಡ್ಡ ದೊಡ್ಡ ಉದ್ದಿಮೆಗಳಿಗೆ ಪೂರೈಸಿದ್ದು ಅಂತಹ ಕಂಪನಿಗಳಿಗೇ 2 ರಿಂದ 4 ಟಿಎಂಸಿ ನೀರು ಬೇಕು. ಅಂದರೆ, ಕರ್ನಾಟಕ ದೊಡ್ಡ ಪ್ರಮಾಣದ ನೀರನ್ನು ಈ ಉದ್ದಿಮೆಗಳಿಗೆ ಕೊಟ್ಟು ಖರ್ಚು ಮಾಡಿಕೊಂಡು ನಮ್ಮಲ್ಲಿಗೆ ನೀರಿನ ಭಿಕ್ಷೆ ಕೇಳಲು ಬರುತ್ತದೆ.
