ಅನರ್ಹತೆ ಪ್ರಶ್ನಿಸಿ 18 ಶಾಸಕರು ಹಾಗೂ ವಿಶ್ವಾಸಮತ ಯಾಚನೆಗೆ ಆದೇಶ ಕೋರಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅರ್ಜಿ ಸಲ್ಲಿಸಿದ್ದರು.
ಚೆನ್ನೈ(ಸೆ.20): ತಾನು ಮುಂದಿನ ದೇಶ ನೀಡುವವರೆಗೂ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸದಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದ, ಹಿನ್ನಲೆಯಲ್ಲಿ ಆಡಳಿತರೂಢ ಪಳಿನಿಸ್ವಾಮಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಅನರ್ಹತೆ ವಿರುದ್ಧ ತಮಿಳುನಾಡಿನ ಅಣ್ಣಾ ಡಿಎಂಕೆ ಟಿಟಿವಿ ದಿನಕರನ್ ಬಣದ 18 ಶಾಸಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಆದೇಶದಿಂದ ಬೇಗ ವಿಶ್ವಾಸಮತ ಸಾಬೀತುಪಡಿಸುವ ಪಳನಿಸ್ವಾಮಿ-ಪನ್ನೀರಸೆಲ್ವಂ ಬಣಗಳಿಗೆ ಭಾರಿ ಹಿನ್ನಡೆಯಾಗಿದೆ.
ಅನರ್ಹತೆ ಪ್ರಶ್ನಿಸಿ 18 ಶಾಸಕರು ಹಾಗೂ ವಿಶ್ವಾಸಮತ ಯಾಚನೆಗೆ ಆದೇಶ ಕೋರಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಅರ್ಜಿ ಸಲ್ಲಿಸಿದ್ದರು. ಇವುಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿದ ನ್ಯಾ. ದೊರೆಸ್ವಾಮಿ ಅವರ ಪೀಠ, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದೆ. ಸ್ಟಾಲಿನ್ ಪರ ಖ್ಯಾತ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
