ನವದೆಹಲಿ (ಸೆ.17): ಫಿನ್’ಲ್ಯಾಂಡ್ ಪ್ರವಾಸದಲ್ಲಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಕೂಡಲೇ ದೆಹಲಿಗೆ ವಾಪಸಾಗುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದ್ದಾರೆ.

ದೆಹಲಿಯಲ್ಲಿ ಸಾಂಕ್ರಾಮಿಕ ರೋಗಗಳು ಮಿತಿ ಮೀರಿವೆ. ಡೆಂಘೀ ಹಾಗೂ ಚಿಕುನ್ ಗೂನ್ಯಾದಿಂದ ಜನ ತತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಾದ ಸಿಎಂ ಅನಾರೋಗ್ಯ ನಿಮಿತ್ತ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇವರ ಅನುಪಸ್ಥಿತಿಯಲ್ಲಿ ಜವಾಬ್ದಾರಿ ನಿಭಾಯಿಸಬೇಕಾದವರು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ. ಆದರೆ ಮನೀಶ್ ಫಿನ್ ಲ್ಯಾಂಡ್ ಶಿಕ್ಷಣ ವ್ಯವಸ್ಥೆಯ ಕುರಿತ ಅಧ್ಯಯನಕ್ಕಾಗಿ ಫಿನ್​ಲ್ಯಾಂಡ್​ಗೆ ತೆರಳಿದ್ದಾರೆ. ಹೀಗಾಗಿ ಕೂಡಲೇ ಮನೀಶ್ ಸಿಸೋಡಿಯಾ ದೆಹಲಿಗೆ ವಾಪಸಾಗುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೂಚಿಸಿದ್ದಾರೆ.