Asianet Suvarna News Asianet Suvarna News

ನಮ್ಮ ರಾಜಧಾನಿ ಬೆಂಗಳೂರಲ್ಲಿ ಮಾಲಿನ್ಯ ಕಡಿಮೆ

ಕರ್ನಾಟಕದ ಇತರೆಲ್ಲಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ವಿಪರೀತ ಎಂದು ಜನರು ದೂರುವುದು ಸಾಮಾನ್ಯ. ಆದರೆ ನಂಬಿ, ಐಟಿ ಸಿಟಿ ಬೆಂಗಳೂರಿನಲ್ಲಿ ಹೆಚ್ಚು ಮಾಲಿನ್ಯವೇ ಇಲ್ಲ. ಅತ್ಯಂತ ಕಡಿಮೆ ಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ಕರುನಾಡಿನ ರಾಜಧಾನಿ ಎರಡನೇ ಸ್ಥಾನ ಪಡೆದಿದೆ!

Low Pollution Level In Bengaluru

ನವದೆಹಲಿ(ಜ.12): ಕರ್ನಾಟಕದ ಇತರೆಲ್ಲಾ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಾಯುಮಾಲಿನ್ಯ ವಿಪರೀತ ಎಂದು ಜನರು ದೂರುವುದು ಸಾಮಾನ್ಯ. ಆದರೆ ನಂಬಿ, ಐಟಿ ಸಿಟಿ ಬೆಂಗಳೂರಿನಲ್ಲಿ ಹೆಚ್ಚು ಮಾಲಿನ್ಯವೇ ಇಲ್ಲ. ಅತ್ಯಂತ ಕಡಿಮೆ ಮಾಲಿನ್ಯ ಹೊಂದಿದ ನಗರಗಳ ಪಟ್ಟಿಯಲ್ಲಿ ಕರುನಾಡಿನ ರಾಜಧಾನಿ ಎರಡನೇ ಸ್ಥಾನ ಪಡೆದಿದೆ!

ಮಾಲಿನ್ಯದ ಮೇಲೆ ನಿಗಾ ಹಾಗೂ ನಿಯಂತ್ರಣ ವ್ಯವಸ್ಥೆ ಹೊಂದಿರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಈ ಕುರಿತು ಘೋಷಣೆ ಮಾಡಿದೆ. ದೇಶದ 51 ನಗರಗಳಲ್ಲಿ 2017ನೇ ಸಾಲಿನಲ್ಲಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ)ದ ಸರಾಸರಿ ತೆಗೆದು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಆ ಪ್ರಕಾರ ರಾಷ್ಟ್ರ ರಾಜಧಾನಿ ವಲಯದಲ್ಲಿರುವ ದೆಹಲಿ, ಗಾಜಿಯಾಬಾದ್ ಹಾಗೂ ಗುಡಗಾಂವ್ ಮೊದಲ ಮೂರು ಸ್ಥಾನ ಪಡೆದಿವೆ. ಅತ್ಯಂತ ಶುದ್ಧ ವಾಯು ಗುಣಮಟ್ಟ ಹೊಂದಿರುವ ನಗರಗಳ ಪಟ್ಟಿಯಲ್ಲಿ ಕೇರಳ ರಾಜಧಾನಿ ತಿರುವನಂತಪುರ, ಕರ್ನಾಟಕದ ಬೆಂಗಳೂರು ಹಾಗೂ ನವಿ ಮುಂಬೈ ಮೊದಲ ಮೂರು ಸ್ಥಾನ ಪಡೆದಿವೆ.

ಶೂನ್ಯದಿಂದ 50ರವರೆಗೆ ವಾಯುಗುಣ ಮಟ್ಟವಿದ್ದರೆ ಅದನ್ನು ಉತ್ತಮ, 51ರಿಂದ 100ರವರೆಗೆ ಇದ್ದರೆ ಅದು ತೃಪ್ತಿದಾಯಕ,101ರಿಂದ 200 ರವರೆಗೆ ಇದ್ದರೆ ಸಾಧಾರಣ, 201ರಿಂದ 300 ರವರೆಗೆ ಇದ್ದರೆ ಕಳಪೆ ಇದೆ ಎಂದು ವಿಂಗಡಿಸಲಾಗಿದೆ. ದೆಹಲಿಯಲ್ಲಿ ಇದು ಕಳೆದ ನವೆಂಬರ್‌ನಲ್ಲಿ 400ಕ್ಕೇರಿಕೆಯಾಗಿತ್ತು. 

ಬಲವಾಗಿ ಗಾಳಿ ಬೀಸಿದರೆ, ಮಲಿನ ಗಾಳಿ ಸಾಗಿ, ಮಾಲಿನ್ಯ ಮಟ್ಟ ಇಳಿಯುತ್ತದೆ. ಉತ್ತರ ಭಾರತ ಭೂಮಿ ಯಿಂದ ಸುತ್ತುವರಿದಿದೆ. ಇಡೀ ಗಂಗಾ ಬಯಲು ಧೂಳಿನ ಮಾಲಿನ್ಯಕ್ಕೆ ತುತ್ತಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಗುಣ ಮಟ್ಟ ಪ್ರಯೋಗಾಲಯದ ಮುಖ್ಯಸ್ಥ ಡಿ. ಸಹಾ ತಿಳಿಸುತ್ತಾರೆ.

Follow Us:
Download App:
  • android
  • ios