ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ಮಾನವ ಬಾಬಾ ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಸಿಂಗ್​ಗೆ ಲುಕ್​ ಔಟ್​ ನೋಟಿಸ್​ ಜಾರಿಯಾಗಿದೆ.

ಹರ್ಯಾಣ(ಸೆ.01): ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ಮಾನವ ಬಾಬಾ ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ಸಿಂಗ್​ಗೆ ಲುಕ್​ ಔಟ್​ ನೋಟಿಸ್​ ಜಾರಿಯಾಗಿದೆ.

ಪಂಚಕುಲದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಹರ್ಯಾಣ ಪೊಲೀಸರು ಹನಿಪ್ರೀತ್​ಗೆ ಲುಕ್​ಔಟ್​ ನೋಟಿಸ್ ನೀಡಿದ್ದಾರೆ. ಬಾಬಾ ರಾಮ್ ರಹೀಂ ಜೈಲು ಸೇರಿದ ಬಳಿಕ ಹನಿಪ್ರೀತ್​ ನಾಪತ್ತೆಯಾಗಿದ್ದಾಳೆ ಅಂತ ಹೇಳಲಾಗುತ್ತಿದೆ. ಆದರೆ ಹನಿಪ್ರೀತ್ ರೋಹ್ಟಕ್​'ನಲ್ಲಿರುವ ಡೇರಾದಲ್ಲಿ ಅನುಯಾಯಿಗಳ ಜೊತೆ ನೆಲೆಸಿದ್ದಾಳೆ ಅಂತ ಹೇಳಲಾಗ್ತಿದೆ.