ಮೈಸೂರು, [ಮಾ.01]: ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಲೋಕಸಭೆಗೆ ನಿಲ್ಲಿಸಬೇಕೆಂದು ಅಲ್ಲಿನ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಕುಮಾರಸ್ವಾಮಿ ಪುತ್ರಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಿಂದಲೇ ರಾಜಕೀಯಕ್ಕೆ ಕರೆತರಬೇಕೆನ್ನುವುದು ದೊಡ್ಡಗೌಡ್ರ ಕುಟುಂಬದ ಬಯಕೆ ಕೂಡ. ಅಷ್ಟೇ ಅಲ್ಲದೇ ನಿಖಿಲ್ ಗೂ ಸಹ ಮಂಡ್ಯದಿಂದ ಸ್ಪರ್ಧಿಸಬೇಕೆನ್ನುವ ಮನಸ್ಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಮಂಡ್ಯ: ಮಗನ ಗೆಲುವಿಗೆ ಹರಕೆ ಕಟ್ಟಿದ ಅನಿತಾ ಕುಮಾರಸ್ವಾಮಿ

ಆದ್ರೆ, ಇದೀಗ ನಿಖಿಲ್ ಕುಮಾರಸ್ವಾಮಿ ಅವರನ್ನು ಮೈಸೂರಿಗೆ ಕರೆತರಬೇಕು ಎನ್ನುವ ಕೂಗು ಕೇಳಿಬಂದಿದೆ. ಇಂದು [ಶುಕ್ರವಾರ] ಸಿಎಂ ಕುಮಾರಸ್ವಾಮಿಗೆ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭದಲ್ಲಿ, ಸಚಿವ ಜಿ.ಟಿ.ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿದರು. 

ಯಾವ ಜಾಗದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಿದ್ದೀರೋ ಅಂತಾ ಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಬಂದಿದ್ದಾರೆ. ಅವ್ರು ಸಿನಿಮಾ ಹಿರೋ ಆಗಿದ್ದಾರೆ. ಜನ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಬರೋದನ್ನ ಬಯಸುತ್ತಿದ್ದಾರೆ.

ದೇವೇಗೌಡ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ...!

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವರು ಬಯಸಿದ್ದಾರೆ. ಆದ್ರೆ ನಾವು ನಿಖಿಲ್ ಕುಮಾರಸ್ವಾಮಿ ಅವರನ್ನು ಮೈಸೂರಿಗೆ ಕಳುಹಿಸುವಂತೆ ಕೇಳುತ್ತೇವೆ. ನಿಖಿಲ್ ಮೈಸೂರಿನಿಂದ ಸ್ಪರ್ಧೆ ಮಾಡಿದ್ರೆ ಗೆಲ್ಲಿಸುವ ಜವಬ್ದಾರಿ ನಮ್ಮದು ಎಂದು ಜಿ.ಟಿ.ಡಿ ವಿಶ್ವಾಸ ವ್ಯಕ್ತಪಡಿಸಿದರು.