ಬೆಂಗಳೂರು[ಮಾ. 10] ಫೇಸ್ ಬುಕ್, ಟ್ವಿಟರ್ ನಲ್ಲಿ ಬೇಕಾಬಿಟ್ಟಿ ಪ್ರಚಾರ ಮಾಡುವಂತಿಲ್ಲ. ನೀತಿ ಸಂಹಿತೆ ಉಲ್ಲಂಘನೆಯಾದರೆ ಅಂಥವರ ಮೇಲೆ ಕ್ರಮಕ್ಕೆ ಮುಂದಾಗಬಹುದು ಎಂಬುದನ್ನು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಅನುಮತಿ ಕಡ್ಡಾಯ. ಸೋಷಿಯಲ್ ಮೀಡಿಯಾದಲ್ಲಿನ ಪ್ರಚಾರ ಖರ್ಚು-ವೆಚ್ಚದ ಬಗ್ಗೆಯೂ ಪಕ್ಷಗಳು ಮಾಹಿತಿ ನೀಡಬೇಕು. ಮಾಧ್ಯಮಗಳಲ್ಲಿನ ಜಾಹೀರಾತಿನ ಮೇಲೆ ಕಣ್ಣಿಡಲು ಜಿಲ್ಲಾವಾರು ಸಮಿತಿ ರಚನೆ ಮಾಡಲಾಗುತ್ತದೆ.

ಕರ್ನಾಟಕದಲ್ಲಿ ಎರಡು ಹಂತ, ನಿಮ್ಮ ಕ್ಷೇತ್ರದಲ್ಲಿ ಯಾವಾಗ ವೋಟಿಂಗ್?

ಇಲ್ಲಿ ಬಹಳ ಪ್ರಮುಖ ಪ್ರಶ್ನೆ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಯಾವ ರೀತಿಯ ಪ್ರಚಾರ ಅಪರಾಧವಾಗುತ್ತದೆ ಎಂಬುದು. ಇದಕ್ಕೆ ಉತ್ತರ ಬಹಳ ಸರಳ. ಈ ಉದಾಹರಣೆಯನ್ನು ಗಮನನಿಸಿ..ನಿಮಗೆ ಉತ್ತರ ಸಿಗುತ್ತದೆ.

ವಾಕ್ಯ 1: ಈ ವ್ಯಕ್ತಿ[ಹೆಸರು ಉಲ್ಲೇಖಿಸಿ ] ಉತ್ತಮ ಅಭ್ಯರ್ಥಿ, ಕಳೆದ ಸಾರಿಯಿಂದ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಭಿವೃದ್ಧಿ ಮಾಡಿರುವುದನ್ನು ನೋಡಿ ಮತದಾನ ಮಾಡಿ...ನಮ್ಮ ಜಾತಿಗೆ ಬೆಂಬಲವಾಗಿ ನಿಂತಿದ್ದಾರೆ.. ಹೀಗೆ ಬರೆದುಕೊಂಡರೆ ನೀತಿ ಸಂಹಿತೆ ಉಲ್ಲಂಘನೆ.

ವಾಕ್ಯ 2: ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡಲೇಬೇಕು. ಪ್ರತಿಯೊಬ್ಬರು ವೋಟಿಂಗ್ ಮಾಡಿ, ನಿಮ್ಮ ಹಕ್ಕು ಚಲಾಯಿಸಿ, ಸಮೃದ್ಧ ಸದೃಢ ಭಾರತ ಕಟ್ಟಲು ನೆರವಾಗಿ.. ಹೀಗೆ ಬರೆದರೆ ನೀತಿ ಸಂಹಿತೆ ಉಲ್ಲಂಘನೆ ಆಗುವುದಿಲ್ಲ.

ಅಂದರೆ, ಪಕ್ಷ, ವ್ಯಕ್ತಿ, ಅಥವಾ ವ್ಯಕ್ತಿಗೆ ಸಂಬಂಧಿಸಿದವರನ್ನು ಉಲ್ಲೇಖಿಸಿ ಬರೆದುಕೊಳ್ಳುವುದು ಸಲ್ಲ ಎಂಬುದು ಬಹಳ ಪ್ರಮುಖ ಅಂಶ.