ಮುಂಬೈ :  ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳು ಅಕ್ಟೋಬರ್‌ನಲ್ಲಿ ನಡೆಯಬೇಕಿದೆ. ಆದರೆ ಸರ್ಜಿಕಲ್ ದಾಳಿ ಬಳಿಕ ಬಿಜೆಪಿ ಜನಪ್ರಿಯತೆ ಏರಿಕೆಯಾಗಿದ್ದು, ಇದೇ ಅಲೆಯಲ್ಲಿ ಅವಧಿಪೂರ್ವ ವಿಧಾನಸಭೆ ಚುನಾವಣೆ ಇಟ್ಟುಕೊಂಡರೆ ಕೇಸರಿ ಕೂಟಕ್ಕೆ ಜಯ ಪ್ರಾಪ್ತಿಯಾಗಬಹುದು ಎಂಬ ಅನಿಸಿಕೆ ವ್ಯಕ್ತವಾಗಿದೆ. 

ಇದೇ ಕಾರಣಕ್ಕೆ ಲೋಕಸಭೆ ಚುನಾವಣೆ ಜತೆಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕೂಡ ನಡೆಸಲು ಬಿಜೆಪಿ ಯೋಚಿಸುತ್ತಿದೆ ಎಂಬ ಗುಲ್ಲು ಹರಡಿದೆ. 

'ಲೋಕಸಭಾ ಚುನಾವಣೆ : ಜೆಡಿಎಸ್ - ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಗೆಲುವು'

ಆದರೆ, ‘ಇದು ಕೇವಲ ಊಹಾಪೋಹ. ವಿಧಾನಸಭೆಯನ್ನು ನಾವು ವಿಸರ್ಜಿಸಲ್ಲ.  ಇದನ್ನು ಬರೆದಿಟ್ಟುಕೊಳ್ಳಿ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವದಂತಿಗಳನ್ನು ತಣ್ಣಗೆ ಮಾಡಲು ಯತ್ನಿಸಿದ್ದಾರೆ.