Asianet Suvarna News Asianet Suvarna News

ಎಲ್ಲೆಂದರಲ್ಲಿ ಕಸ ಎಸೆದರೆ 1 ಲಕ್ಷ ರೂಪಾಯಿ ದಂಡ!

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ 1 ಲಕ್ಷ ರು. ವರೆಗೂ ದಂಡ ತೆರಬೇಕಾಗಿ ಬರಬಹುದು. ಈ ಸಂಬಂಧ ಪಶ್ಚಿಮ ಬಂಗಾಳ ವಿಧಾನಸಭೆ ಮಸೂದೆಯೊಂದನ್ನು ಅಂಗೀಕರಿಸಿದೆ. 

littering fine in calcutta can go up to rupees one lakh
Author
Kolkata, First Published Nov 24, 2018, 9:19 AM IST

ಕೋಲ್ಕತಾ[ನ.24]: ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ 1 ಲಕ್ಷ ರು. ವರೆಗೂ ದಂಡ ತೆರಬೇಕಾಗಿ ಬರಬಹುದು. ಈ ಸಂಬಂಧ ಪಶ್ಚಿಮ ಬಂಗಾಳ ವಿಧಾನಸಭೆ ಮಸೂದೆಯೊಂದನ್ನು ಅಂಗೀಕರಿಸಿದೆ.

ಕೋಲ್ಕತಾ ಮುನ್ಸಿಪಲ್‌ ಕಾರ್ಪೊರೇಷನ್‌ನ ಕಾಯ್ದೆಗೆ ತಿದ್ದುಪಡಿ ತಂದು ಕಸ ಎಸೆಯುವವರ ವಿರುದ್ಧ ದಂಡದ ಪ್ರಮಾಣವನ್ನು ಭಾರೀ ಮಟ್ಟದಲ್ಲಿ ಏರಿಕೆ ಮಾಡಲಾಗಿದೆ. ಈ ಪ್ರಕಾರ ಕಸ ಎಸೆದರೆ ಅಥವಾ ಪಾನ್‌ ಪರಾಕ್‌ ಉಗುಳಿ ಹೊಲಸು ಮಾಡಿದರೆ 5000 ರು.ನಿಂದ 1 ಲಕ್ಷ ರು.ವರೆಗೂ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಇಷ್ಟುದಿನ ಕಸ ಎಸೆದರೆ 50 ರು.ನಿಂದ 5000 ರು.ವರೆಗಷ್ಟೇ ದಂಡ ವಿಧಿಸಲಾಗುತ್ತಿತ್ತು.

Follow Us:
Download App:
  • android
  • ios