ಶಿವಮೊಗ್ಗ(ಸೆ.20): ಕುಡಿದ ಅಮಲಿನಲ್ಲಿ ಯುವಕರಿಬ್ಬರು ರಸ್ತೆಯುದ್ದಕ್ಕೂ ಎರ್ರಾಬಿರ್ರಿ ಬೈಕ್ ಚಲಾಯಿಸಿ ಸಂಚಾರಿ ಪೋಲಿಸರಿಗೆ ಮನಬಂದಂತೆ ಬೈಯ್ದು, ಕೊನೆಗೆ ಕೇಸು ಹಾಕಿಸಿ ಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋಪಿ ವೃತ್ತದ ಬಳಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರು ರಸ್ತೆ ಬದಿಯ ಮರಕ್ಕೆ ಜೋತು ಬಿದ್ದು ಟ್ರಾಫಿಕ್ ಪೋಲಿಸರನ್ನು ಇನ್ನಿಲ್ಲದ ಪೇಚಿಗೆ ಸಿಲುಕಿಸಿದ್ದರು. ಈ ಕುಡುಕರ ಹಾವಳಿ ತಾಳಲಾರದೇ ಪೋಲಿಸರು ಹೊಯ್ಸಳ ಕರೆಯಿಸಿ ಪಶ್ಚಿಮ ಸಂಚಾರಿ ಠಾಣೆಗೆ ಕರೆದ್ಯೊಯ್ದು ಡ್ರಂಕ್ ಅಂಡ್ ಡ್ರೈವ್, ಱಷ್ ಡ್ರೈವ್ ಕೇಸುಗಳನ್ನು ಹಾಕಿದ್ದಾರೆ.

ಭದ್ರಾವತಿಯ ಅಕ್ಷಯ್ ಮತ್ತು ಶಿವಮೊಗ್ಗ ನಗರದ ಟ್ಯಾಂಕ್ ಮೊಹಲ್ಲಾದ ರಾಣಾ ಎಂಬುವವರೇ ಇಷ್ಟೆಲ್ಲಾ ರಾದ್ದಾಂತ ಕ್ರಿಯೇಟ್​ ಮಾಡಿದವರು. ನಿನ್ನೆ ನಡೆದ ಈ ಘಟನೆ ಕೆಲಕಾಲ ಸಾರ್ವಜನಿಕರಿಗೆ ಮನರಂಜನೆ ನೀಡಿದ್ದಂತೂ ನಿಜ.