ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮದ ಬಗೆಗಿನ ಚರ್ಚೆ ತಾರಕಕ್ಕೇರುತ್ತಿದೆ. ವೀರಶೈವರ ವಿರೋಧದ ನಡುವೆ ಇಂದು ಲಿಂಗಾಯತ ಸಮಾವೇಶ ನಡೆಸಲು ಭಾರಿ ಸಿದ್ಧತೆ ನಡೆದಿದೆ.

ಕಲಬುರಗಿ(ಸೆ.24): ವೀರಶೈವ ಲಿಂಗಾಯತ ಮತ್ತು ಲಿಂಗಾಯತ ಧರ್ಮದ ಬಗೆಗಿನ ಚರ್ಚೆ ತಾರಕಕ್ಕೇರುತ್ತಿದೆ. ವೀರಶೈವರ ವಿರೋಧದ ನಡುವೆ ಇಂದು ಲಿಂಗಾಯತ ಸಮಾವೇಶ ನಡೆಸಲು ಭಾರಿ ಸಿದ್ಧತೆ ನಡೆದಿದೆ.

ನಗರದ ಎನ್.ವಿ. ಮೈದಾನದಲ್ಲಿ ಲಿಂಗಾಯತ ಸಮಾವೇಶ ನಡೆಯಲಿದೆ. ಸುಮಾರು 5 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಲಿಂಗಾಯತ ಸಮನ್ವಯ ಸಮಿತಿ ತಿಳಿಸಿದೆ. ಈಗಾಗಲೇ ಬೀದರ್‌‌, ಕಲಬುರಗಿ, ಯಾದಗಿರಿ ಹಲವು ತಾಲೂಕು ಗ್ರಾಮಗಳಿಗೆ ಹೋಗಿ ಸಮಾವೇಶದ ಬಗ್ಗೆ ಜನರಿಗೆ ತಿಳಿಸಲಾಗಿದೆ.

ಇಂದಿನ ಸಮಾವೇಶಕ್ಕೆ ಜನಸಾಗರ ಸೇರುವ ನಿರೀಕ್ಷೆ ಇದೆ. ನಗರದಲ್ಲಿ ಎರಡು ದಿನಗಳಿಂದ ಬೈಕ್, ಅಟೋ ಹಾಗೂ ಇಂದು ಕಾರ್‌‌ ರ‍್ಯಾಲಿ ನಡೆಸುವ ಮೂಲಕ ಲಿಂಗಾಯತರು ಸಮಾವೇಶದ ಪೂರ್ವ ತಯಾರಿ ಜೋರಾಗಿ ನಡೆಸುತ್ತಿದ್ದಾರೆ. ಇಂದಿನ ಸಮಾವೇಶ ಭಾರಿ ಕುತೂಹಲ ಮೂಡಿಸಿದೆ.