ಬೆಳಗಾವಿ(ಆ.21) ಯುವತಿಯೊಬ್ಬಳು ಬೆತ್ತಲೆಯಾಗಿ ನಡುರಾತ್ರಿ ರಸ್ತೆಯಲ್ಲಿ ಬೈಕ್ ಓಡಿಸಿದ್ದಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಬೈಕ್ ಓಡಿಸಿದ್ದು ಅವಳಲ್ಲ... ಅವನು!
ದೃಶ್ಯ ಬೆಳಗಾವಿ ನಗರದ ಕೊಲ್ಲಾಪುರ ರಸ್ತೆಯದ್ದು ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣದ ಹಿಂದೆ ಸಲಿಂಗ ಪ್ರೇಮದ ಕತೆಯಿದೆಯಂತೆ! 

ಬಾಲ್ಯ ಗೆಳೆಯರಾಗಿದ್ದ ಇಬ್ಬರು ಯುವಕರ ನಡುವೆ ಪ್ರೇಮಾಂಕರುವಾಗಿದೆ. ಅವರಲ್ಲಿ ಒಬ್ಬನಲ್ಲಿ ಹೆಣ್ಣಿನ ಭಾವನೆಗಳು ಬೆಳೆದಿವೆ. ಹದಿಹರೆಯಕ್ಕೆ ಕಾಲಿಟ್ಟ ಇಬ್ಬರಿಗೂ ದೇಹದ ವಾಂಛೆ ಪೂರೈಸಿಕೊಳ್ಳುವ ಹಂಬಲ.  ಆದರೆ ನಿಧಾನವಾಗಿ ಬೆಳಗಾವಿಯಲ್ಲಿ ವಾಸವಿದ್ದವನಿಗೆ ಈ ಹೆಣ್ಣು ಭಾವನೆಯ ಹುಡುಗನಿಂದ ದೂರವಾಗಬೇಕು ಎನಿಸಿದೆ.

ಬೆತ್ತಲೆ ಬೈಕ್ ಓಡಿಸಿದ ವಿಡಿಯೋ ವೈರಲ್

ಹೆಣ್ಣುತನ ಮೈಗೂಡಿಸಿಕೊಂಡಿದ್ದ ಯುವಕ ಬೆಂಗಳೂರಿನಲ್ಲಿ ವಾಸವಿದ್ದ.  ಬೆಳಗಾವಿಯಲ್ಲಿ ವಾಸವಿದ್ದವನಿಗೆ ನಿರಂತರ ಕರೆ ಮತ್ತು ಸಂದೇಶ ರವಾನೆ ಮಾಡಿದ್ದಾನೆ. ಆದರೆ ಅಲ್ಲಿಂದ ಯಾ ಉತ್ತರ ಬಂದಿಲ್ಲ. ತಕ್ಷಣವೇ ಬೆಂಗಳೂರಿನಿಂದ ಹೊರಟು ಬೆಳಗಾವಿ ತಲುಪಿದ್ದಾನೆ. ಅಲ್ಲಿ ಒಂದಾದ ಇಬ್ಬರು ಬಾರ್ ವೊಂದಕ್ಕೆ ತೆರಳಿ ಮದ್ಯ ಏರಿಸಿದ್ದಾರೆ.

ಈ ನಡುವೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ತಾರಕಕ್ಕೆ ಹೋದಾಗ ಒಂದು ಹಂತದಲ್ಲಿ ಬೆಂಗಳೂರಿನಲ್ಲಿ ವಾಸವಿದ್ದ ಯುವಕ ತನ್ನೆಲ್ಲ ಬಟ್ಟೆ ಕಳಚಿ ಎಸೆದಿದ್ದಾನೆ. ಅಲ್ಲಿಂದ ಜಗಳವಾಡುತ್ತಲೇ ಇಬ್ಬರು ಒಂದೇ ಬೈಕ್ ನಲ್ಲಿ ಬಂದಿದ್ದಾರೆ.

ಕೊಲ್ಲಾಪುರ ರಸ್ತೆಯ ಕ್ರಾಸ್ ಒಂದರ ಬಳಿ ಜಗಳ ಮತ್ತಷ್ಟು ಜೋರಾದಾಗ ಬೆಳಗಾವಿ ಯುವಕ ಬೈಕ್ ಬಿಟ್ಟು ಹೊರನಡೆದಿದ್ದಾನೆ. ಇದೇ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ವೈರಲ್ ಆಗುತ್ತಿದೆ. ಇಬ್ಬರು ಯುವಕರಿಗೂ ಕೌನ್ಸೆಲಿಂಗ್ ಅಗತ್ಯ ಇದೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.