ಬೆಳಗಾವಿ: ಯುವತಿಯೊಬ್ಬಳು ಬೆತ್ತಲೆಯಾಗಿ ಬೈಕ್‌ ಚಲಾಯಿಸಿರುವ ವಿಡಿಯೋ ವೈರಲ್‌ ಆಗಿದ್ದು, ಅದು ಬೆಳಗಾವಿ ನಗರದಲ್ಲಿ ನಡೆದಿದೆಯೇ ಎಂಬ ಬಗ್ಗೆ ತನಿಖೆಯೂ ನಡೆಯಿತು. ಆದರೆ ಯಾವ ಕಾರಣಕ್ಕೆ ಯುವತಿ ಹೀಗೆ ಮಾಡಿರಬಹುದು ಎಂಬ ಪ್ರಶ್ನೆಗಳಿಗೂ ಸೋಶಿಯಲ್ ಮೀಡಿಯಾ ಕೆಲವೊಂದು ಉತ್ತರ ನೀಡಲಾಗಿತ್ತು.

ಅಮಲಾ ಪೌಲ್ ಅಭಿನಯದ ತಮಿಳಿನ Aadai ಚಿತ್ರಕ್ಕೂ ಈ ಯುವತಿ ಮಾಡಿರುವ ಕೆಲಸಕ್ಕೂ ಸಂಬಂಧ ಇದೇಯಾ? ಚಿತ್ರದಲ್ಲಿ ಅಮಲಾ ಪೌಲ್ ಸ್ನೇಹಿತರಿಗೆ ಸವಾಲು ಹಾಕಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆತ್ತಲೆಯಾಗಿ ಇಡೀ ದಿನ ಕಳೆಯುತ್ತೇನೆ ಎಂದು ಹೇಳುತ್ತಾರೆ. ಚಿತ್ರದ ಸಂಪೂರ್ಣ ಕತೆ ಇದರ ಮೇಲೆಯೇ ನಿರ್ಧಾರವಾಗಿದೆ.

ಬೆತ್ತಲೆಯಾಗಿ ಬೈಕ್‌ ಓಡಿ​ಸಿ​ದ ಯುವತಿ ವಿಡಿಯೋ ವೈರಲ್‌!

ಈ ಯುವತಿ ಮಾಡಿರುವ ಕೆಲಸಕ್ಕೂ ಇದೇ ಚಿತ್ರ ಪ್ರೇರಣೆ ನೀಡಿತಾ? ಪ್ರಾಥಮಿಕ ಮಾಹಿತಿ ಹೇಳುವಂತೆ ಯುವತಿ ಹೊರ ರಾಜ್ಯದಿಂದ ಓದಲು ಇಲ್ಲಿಗೆ ಬಂದವಳಾಗಿರಬೇಕು. ಆದರೆ  ತಮಿಳಿನ ಚಿತ್ರ ನೋಡಿ ಯುವತಿ ಹೀಗೆ ಮಾಡಿರುವ ಸಾಧ್ಯತೆ ಇದೆ ಎಂದು ಸೋಶಿಯಲ್ ಮೀಡಿಯಾ ಸಂಶೋಧನೆ ಮಾಡಿದೆ!

ಆದರೆ, ಕಡೆಗೆ ಸತ್ಯ ಹೊರ ಬಿದ್ದಿದ್ದು, ಇದು ಯುವತಿ ಅಲ್ಲ ಯುವಕನೆಂಬುವುದು ತಿಳಿದುಬಂದಿದೆ. ಸಲಿಂಗ ಕಾಮಿಯಾಗಿದ್ದ ಈ ಯುವಕ ತನ್ನ ಸಂಗಾತಿಯೊಂದಿಗೆ ಜಗಳವಾಡಿದ್ದು, ಸಿಟ್ಟಿನಲ್ಲಿ ಇಂಥದ್ದೊಂದು ನಡೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದ ಈ ಘಟನೆ ನಂತರ ತಾರ್ಕಿಕ ಅಂತ್ಯ ಕಂಡಿದೆ.