Asianet Suvarna News Asianet Suvarna News

ವೃತ್ತಿಗೆ ವಿದಾಯ ಹೇಳಿ ಪೀಠಾಧಿಪತಿಯಾಗಿ ದೀಕ್ಷೆ ಸ್ವೀಕರಿಸಿದ ಉಪನ್ಯಾಸಕ

ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಯುವಕ ಈಗ ಪ್ರಮುಖ ಮಠದ ಪೀಠಾಧಿಪತಿಯಾಗಿದ್ದಾರೆ.  

Lecurer taking oath as Seer

ಬೆಂಗಳೂರು (ಮಾ. 15): ಕಾಲೇಜು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಯುವಕ ಈಗ ಪ್ರಮುಖ ಮಠದ ಪೀಠಾಧಿಪತಿಯಾಗಿದ್ದಾರೆ.  

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಯುವಕ ಶಶಿಕುಮಾರ್​ ಎಂಬುವವರು ಪೀಠಾಧಿಪತಿಯಾಗಿ ದೀಕ್ಷೆ ಸ್ವೀಕರಿಸಿದ್ದಾರೆ.  ರಾಮನಗರ ಜಿಲ್ಲೆ ಕನಕಪುರ ಶ್ರೀ ದೇಗುಲ ಮಠದ 13ನೇಯ ಮಠಾಧಿಪತಿಯಾಗಿ ಶಿವಕುಮಾರ್ ಆಯ್ಕೆಯಾಗಿದ್ದಾರೆ.  ಶ್ರೀ ಮುಮ್ಮುಡಿ ಮಹಾಲಿಂಗ ಸ್ವಾಮಿಗಳು ಆಕಸ್ಮಿಕವಾಗಿ ಕಿರಿಯ ವಯಸ್ಸಿನಲ್ಲೇ ನಿಧನರಾದ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ಶಶಿಕುಮಾರ್​ ಅವರನ್ನು ನೇಮಕ ಮಾಡಲಾಗಿದೆ.  

ಶಶಿಕುಮಾರ್  ಚಾಮರಾಜನಗರ ತಾಲೂಕು ಕುಲಗಾಣ ಗ್ರಾಮದ ಶರಣ ದಂಪತಿ ಕೆ.ಎಸ್. ಗೌರಿಶಂಕರಸ್ವಾಮಿ ಹಾಗೂ ಎಸ್. ಕೋಮಲಾಂಬರ ಪುತ್ರ. ಶಶಿಕುಮಾರ್ ಎಂಬಿಎ ಪದವೀಧರ. ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್​ಎಸ್​ ಕಾಲೇಜಿನಲ್ಲಿ ಇದುವರೆಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ದೇಗುಲ ಮಠಕ್ಕೆ ಏಳು ಶತಮಾನಗಳ ಇತಿಹಾಸವಿದ್ದು, 45ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮಠ ಮುನ್ನಡೆಸುತ್ತಿದೆ. ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳು, ಹೊಸಮಠದ ಶ್ರೀ ಚಿದಾನಂದಸ್ವಾಮಿಗಳು ಸೇರಿ ಹಲವರು ಭಾಗಿಯಾಗಿದ್ದರು. 

Follow Us:
Download App:
  • android
  • ios