ಮದುವೆ ನೋಂದಣಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬೇಕೆಂದು ಲಾ ಕಮಿಷನ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ವಿವಾಹ ನೋಂದಣಿಯನ್ನು ದೇಶದಲ್ಲಿ ಕಡ್ಡಾಯಗೊಳಿಸಬೇಕು, ಹಾಗೂ ಅದರ ಜೊತೆ  ಆಧಾರ್ ಕಾರ್ಡಿನ ಸಂಯೋಜನೆಯನ್ನು ಕೂಡಾ ಕಡ್ಡಾಯಗೊಳಿಸಬೇಕೆಂದು ಲಾ ಕಮಿಷನ್ ಒತ್ತು ನೀಡಿದೆ.

ನವದೆಹಲಿ: ಮದುವೆ ನೋಂದಣಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬೇಕೆಂದು ಲಾ ಕಮಿಷನ್ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ವಿವಾಹ ನೋಂದಣಿಯನ್ನು ದೇಶದಲ್ಲಿ ಕಡ್ಡಾಯಗೊಳಿಸಬೇಕು, ಹಾಗೂ ಅದರ ಜೊತೆ ಆಧಾರ್ ಕಾರ್ಡಿನ ಸಂಯೋಜನೆಯನ್ನು ಕೂಡಾ ಕಡ್ಡಾಯಗೊಳಿಸಬೇಕೆಂದು ಲಾ ಕಮಿಷನ್ ಒತ್ತು ನೀಡಿದೆ.

ಮದುವೆ ನೋಂದಣಿಯನ್ನು ಆಧಾರ್ ಕಾರ್ಡ್’ನೊಂದಿಗೆ ಸಂಯೋಜಿಸುವುದರಿಂದ ದಾಖಲೆಗಳ ಪತ್ತೆ ಹಾಗೂ ನಿರ್ವಹಣೆ ಸುಲಭವಾಗುತ್ತದೆಯೆಂದು ಲಾ ಕಮಿಷನ್ ಹೇಳಿದೆ.

ಮದುವೆಯ 30 ದಿನಗಳೋಳಗೆ ನೋಂದಣಿಯನ್ನು ಕಡ್ಡಾಯಗೊಳಿಸಬೇಕು ಹಾಗೂ ವಿಳಂಬವಾದಲ್ಲಿ ಪ್ರತಿ ದಿನ ರೂ.5 ದಂಡವನ್ನು ವಿಧಿಸಬೇಕೆಂದು ಲಾ ಕಮಿಷನ್ ಸಲಹೆ ನೀಡಿದೆ.