ಪ್ರಧಾನಿ ನರೇಂದ್ರ ಮೋದಿಯವರ ತವರಿನಲ್ಲೆ ನೂತನ GST ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಸೂರತ್(ಜು.03): ಪ್ರಧಾನಿ ನರೇಂದ್ರ ಮೋದಿಯವರ ತವರಿನಲ್ಲೆ ನೂತನ GST ಕಾಯ್ದೆಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಗುಜರಾತ್​'ನ ಸೂರತ್​ ಜವಳಿ ವ್ಯಾಪಾರಿಗಳ ಮೇಲೆ ಪೊಲೀಸರು ಇಂದು ಲಾಠೀಚಾರ್ಜ್​ ನಡೆಸಿದ್ದಾರೆ. ಸೂರತ್​ನಲ್ಲಿ GST ವಿರೋಧಿಸಿ, ಜವಳಿ ವ್ಯಾಪಾರಿಗಳು ಬೀದಿಗಿಳಿದಿದ್ದಾರೆ. ಸೂರತ್​'ನ ಎಲ್ಲ ಬಟ್ಟೆ ಅಂಗಡಿಗಳಿಗೆ ಬೀಗ ಜಡಿದು, ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠೀಚಾರ್ಜ್​ ನಡೆಸಿದ್ದಾರೆ. ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಒಂದು ದೇಶ ಒಂದು ತೆರಿಗೆ ಉದ್ದೇಶದಿಂದ ನೂತನ GST ಕಾಯ್ದೆ ಜಾರಿಗೆ ತಂದಿದ್ದರು. ಇದೀಗ ಈ ಕಾಯ್ದೆಗೆ ಪ್ರಧಾನಿ ತವರಲ್ಲೇ ವಿರೋಧ ವ್ಯಕ್ತವಾಗಿದೆ.