ಉದ್ಯಮಿಗಳು ತಮ್ಮ ಉದ್ಯಮವನ್ನು ಜು. 30ರೊಳಗೆ ಜಿಎಸ್ಟಿಯಡಿ ನೋಂದಣಿ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಆದರೆ ರೂ. 20 ಲಕ್ಷಕ್ಕಿಂತ ಕಡಿಮೆ ವಹಿವಾಟಿನ ಉದ್ಯಮಿಗಳು, ಜಿಎಸ್ಟಿಯಿಂದ ವಿನಾಯ್ತಿ ಪಡೆದಿರುವ ಸಾಮಾಗ್ರಿ ಸರಬರಾಜು ಮಾಡುವವರು, ನೋಂದಣಿ ಮಾಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದೆ.
ನವದೆಹಲಿ: ಉದ್ಯಮಿಗಳು ತಮ್ಮ ಉದ್ಯಮವನ್ನು ಜು. 30ರೊಳಗೆ ಜಿಎಸ್ಟಿಯಡಿ ನೋಂದಣಿ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ.
ಆದರೆ ರೂ. 20 ಲಕ್ಷಕ್ಕಿಂತ ಕಡಿಮೆ ವಹಿವಾಟಿನ ಉದ್ಯಮಿಗಳು, ಜಿಎಸ್ಟಿಯಿಂದ ವಿನಾಯ್ತಿ ಪಡೆದಿರುವ ಸಾಮಾಗ್ರಿ ಸರಬರಾಜು ಮಾಡುವವರು, ನೋಂದಣಿ ಮಾಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದೆ.
ಜಿಎಸ್ಟಿ ಕಾನೂನು ಪ್ರಕಾರ ಪ್ರತಿಯೊಬ್ಬ ಉದ್ಯಮಿ ಜು. 30ರೊಳಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಕಡೆಯ ದಿನಾಂಕಕ್ಕಾಗಿ ಕಾಯದೇ ಈಗಲೇ ನೋಂದಣಿ ಮಾಡಿಸಿಕೊಳ್ಳಿ, ಎಂದು ವಿತ್ತ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
