ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಮಗ ತೇಜ್ ಪ್ರತಾಪ್ ಯಾದವ್ ಮದುವೆಯಲ್ಲಿ ಪಾಲ್ಗೊಳ್ಳಲು ಐದು ದಿನಗಳ ಕಾಲ ಪೆರೋಲ್ ಸಿಕ್ಕಿದೆ.
ಹೊಸದಿಲ್ಲಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಐದು ದಿನಗಳ ಕಾಲ ಪೆರೋಲ್ ಸಿಕ್ಕಿದೆ.
ಇತ್ತೀಚೆಗೆ ಅವರು ಅನಾರೋಗ್ಯದ ನೆಪ ಹೇಳಿ ರಾಂಚಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ದಿಲ್ಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಲಾಲು ಗುಣಮುಖರಾಗಿದ್ದಾರೆಂದು ವೈದ್ಯರು ಘೋಷಿಸಿದ ನಂತರ ಬಿಡುಗಡೆಯಾಗಿದ್ದರು.
ಕಳೆದ ಡಿಸೆಂಬರ್‌ನಲ್ಲಿ ಶಿಕ್ಷೆ ಪ್ರಕಟವಾದಾಗಿನಿಂದಲೂ ಮುಂಡಾ ಕೇಂದ್ರೀಯ ಕಾರಾಗೃಹದಲ್ಲಿರುವ ಲಾಲು, ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಿಹಾರ ಶಾಸಕರಾಗಿರುವ ಲಾಲು ಪುತ್ರ ತೇಜಸ್ವಿ ಯಾದವ್ ಅವರು ಮೇ 12ರಂದು ಆರ್‌ಜೆಡಿ ಶಾಸಕ ಚಂದ್ರಿಕ ರೈ ಪುತ್ರಿ ಐಶ್ವರ್ಯಾ ರೈ ಅವರನ್ನು ವರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಲಾಲು ಪಾಟ್ನಾಗೆ ಪ್ರಯಾಣಿಸಿದ್ದಾರೆ.
ಜಾರ್ಖಂಡ್ ಹೈ ಕೋರ್ಟ್‌ನಲ್ಲಿ ತಾತ್ಕಾಲಿಕ ಜಾಮೀನು ಕೋರಿ ಲಾಲು ಅರ್ಜಿ ಸಲ್ಲಿಸಿದ್ದರು. ಆದರೆ, ವಕೀಲರ ಪ್ರತಿಭಟನೆಯ ಕಾರಣ ಈ ಅರ್ಜಿ ವಿಚಾರಣೆಗೆ ಬಂದಿರಲಿಲ್ಲ. ನಂತರ ಪೆರೋಲ್‌ಗೆ ಅರ್ಜಿ ಸಲ್ಲಿಸಿದ್ದರು.
