ನಾನಿನ್ನೂ ಅಸ್ವಸ್ಥ, ನನ್ನ ಬಿಡುಗಡೆ ಹಿಂದೆ ಮೋದಿ ಕೈವಾಡ: ಲಾಲು

Lalu Prasad Yadav Allegation on PM Modi
Highlights

ಅನಾರೋಗ್ಯದ ನೆಪ ಮುಂದಿಟ್ಟುಕೊಂಡು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಆರ್‌ಜೆಡಿ ನೇತಾರ ಲಾಲು ಯಾದವ್‌ರನ್ನು, ಆಸ್ಪತ್ರೆಯು ಸೋಮವಾರ ಗುಣಮುಖರಾಗಿದ್ದಾರೆ ಎಂದು ಬಿಡುಗಡೆ ಮಾಡಿದೆ. ಆದರೆ ನನಗಿನ್ನೂ ಅನಾರೋಗ್ಯ ಇದ್ದು, ವೈದ್ಯರನ್ನು ದುರ್ಬಳಕೆ ಮಾಡಿಕೊಂಡ ಮೋದಿ  ಸರ್ಕಾರವು ಬಲವಂತವಾಗಿ ಡಿಸ್‌ಚಾರ್ಜ್ ಮಾಡಿ, ರಾಂಚಿಗೆ ಕಳಿಸಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ನವದೆಹಲಿ (ಮೇ.01): ಅನಾರೋಗ್ಯದ ನೆಪ ಮುಂದಿಟ್ಟುಕೊಂಡು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಆರ್‌ಜೆಡಿ ನೇತಾರ ಲಾಲು ಯಾದವ್‌ರನ್ನು, ಆಸ್ಪತ್ರೆಯು ಸೋಮವಾರ ಗುಣಮುಖರಾಗಿದ್ದಾರೆ ಎಂದು ಬಿಡುಗಡೆ ಮಾಡಿದೆ. ಆದರೆ ನನಗಿನ್ನೂ ಅನಾರೋಗ್ಯ ಇದ್ದು, ವೈದ್ಯರನ್ನು ದುರ್ಬಳಕೆ ಮಾಡಿಕೊಂಡ ಮೋದಿ  ಸರ್ಕಾರವು ಬಲವಂತವಾಗಿ ಡಿಸ್‌ಚಾರ್ಜ್ ಮಾಡಿ, ರಾಂಚಿಗೆ ಕಳಿಸಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಮೇವು ಹಗರಣದ ದೋಷಿಯಾಗಿರುವ ಲಾಲು ರಾಂಚಿ ಜೈಲಿನಲ್ಲಿದ್ದರು. ಆದರೆ ಅನಾರೋಗ್ಯದ ನೆಪ ಹೇಳಿ ಮೊದಲು ರಾಂಚಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇತ್ತೀಚೆಗೆ ಹೆಚ್ಚಿನ ಚಿಕಿತ್ಸೆ ಬೇಕು ಎಂದು ದಿಲ್ಲಿಗೆ ಬಂದು ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಈಗ ವೈದ್ಯರು ‘ಲಾಲು ಗುಣಮುಖರಾಗಿದ್ದಾರೆ’ ಎಂದು ಘೋಷಿಸಿ ಬಿಡುಗಡೆ ಮಾಡುತ್ತಿದ್ದಂತೆಯೇ ಲಾಲು ಗಾಲಿಕುರ್ಚಿಯಲ್ಲೇ ಏಮ್ಸ್‌ನಿಂದ ತೆರಳಿದರು. ಈ ವೇಳೆ ಅವರ ಬೆಂಬಲಿಗರು ಏಮ್ಸ್ ಆಸ್ಪತ್ರೆಯ ಎಮರ್ಜೆನ್ಸಿ  ವಾರ್ಡ್ ಮೇಲೆ ದಾಳಿ ಮಾಡಿ ಅಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ. ರೋಗಿಗಳಿಗೆ ತೊಂದರೆ ಮಾಡಿದ್ದಾರೆ.

ಕೊಲೆಗೆ ಸಂಚು:

ಲಾಲು ಕೊಲೆಗೆ ಸಂಚು ನಡೆದಿದೆ. ಈಗ ವೈದ್ಯರು ಅವರನ್ನು ಬಿಡುಗಡೆ ಮಾಡಿರುವುದು ಇದಕ್ಕೆ ಇಂಬು ನೀಡುತ್ತದೆ ಎಂದು ಆರ್‌ಜೆಡಿ ಸಂಸದ ಜೈಪ್ರಕಾಶ ನಾರಾಯಣ ಆರೋಪಿಸಿದ್ದಾರೆ.

ಲಾಲು ಭೇಟಿ ಮಾಡಿದ ರಾಹುಲ್!: ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಲಾಲುರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್  ಸೋಮವಾರ ಭೇಟಿ ಮಾಡಿದರು

loader