ಜಯಮಾಲಾ ನನ್ನ ಹಿರಿಯಕ್ಕನಂತಿದ್ದಾರೆ: ಲಕ್ಷ್ಮೀ ಹೆಬ್ಬಾಳ್’ಕರ್

Lakshmi Hebbalkar Explanation to Jayamala's statement
Highlights

ಸಚಿವೆ ಜಯಮಾಲಾ ಬಗ್ಗೆ ನೀಡಿದ್ದ ಹೇಳಿಕೆ ವಿಚಾರವಾಗಿ  ಲಕ್ಷ್ಮೀ ಹೆಬ್ಬಾಳಕರ್  ಪ್ರತಿಕ್ರಿಯೆ ನೀಡಿದ್ದಾರೆ.  ನಾವು  ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಎಂದರೆ ಅದು ಉರುಳು ಸೇವೆ ಅಂತೀವಿ.  ಹರಕೆ ಸೇವೆ ಅಂತೀವಿ ಮತ್ತು ಪಕ್ಷದ ಸೇವೆ ಅಂತೀವಿ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಅಂತ ಹೇಳಿದ್ದೀನಿ. ನಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಲಕ್ಷ್ಮೀ ಹೆಬ್ಬಾಳ್’ಕರ್ ಹೇಳಿದ್ದಾರೆ. 

ಬೆಳಗಾವಿ (ಜೂ. 17):  ಸಚಿವೆ ಜಯಮಾಲಾ ಬಗ್ಗೆ ನೀಡಿದ್ದ ಹೇಳಿಕೆ ವಿಚಾರವಾಗಿ  ಲಕ್ಷ್ಮೀ ಹೆಬ್ಬಾಳಕರ್  ಪ್ರತಿಕ್ರಿಯೆ ನೀಡಿದ್ದಾರೆ. 

ನಾವು  ಉತ್ತರ ಕರ್ನಾಟಕ ಶೈಲಿಯಲ್ಲಿ ಸೇವೆ ಎಂದರೆ ಅದು ಉರುಳು ಸೇವೆ ಅಂತೀವಿ.  ಹರಕೆ ಸೇವೆ ಅಂತೀವಿ ಮತ್ತು ಪಕ್ಷದ ಸೇವೆ ಅಂತೀವಿ. ನಾನು ಆ ಅರ್ಥದಲ್ಲಿ ಜಯಮಾಲಾ ಅವರು ಪಕ್ಷದ ಸೇವೆ ಮಾಡಿದ್ದಾರೆ ಅಂತ ಹೇಳಿದ್ದೀನಿ. ನಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥ ಮಾಡಿಕೊಂಡಿವೆ ಎಂದು ಲಕ್ಷ್ಮೀ ಹೆಬ್ಬಾಳ್’ಕರ್ ಹೇಳಿದ್ದಾರೆ. 

ಜಯಮಾಲಾ ಅವರ ಜೊತೆ ನನ್ನ ವೈಯಕ್ತಿಕ ಸಂಬಂಧ ಅನ್ಯೋನ್ಯವಾಗಿದೆ. ಜಯಮಾಲಾ ನನ್ನ ಹಿರಿಯ ಅಕ್ಕನಂತಿದ್ದಾರೆ. ಸದಾ ನನ್ನ ಬೆನ್ನು ತಟ್ಟುವ ಕೆಲಸವನ್ನು ಜಯಮಾಲಾ ಮಾಡಿದ್ದಾರೆ.
ಅವರ ಭವಿಷ್ಯ ಉಜ್ವಲವಾಗಲಿ, ಅವರಿಂದ ಒಳ್ಳೆಯ ಕೆಲಸ ಆಗಲಿ. ಅದರಿಂದ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಹೆಸರು ಬರಲಿ ಅಂತ ಹೇಳಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳ್’ಕರ್ ಹೇಳಿದ್ದಾರೆ. 
 

loader