Asianet Suvarna News Asianet Suvarna News

Rule Change: ಪಿಎಫ್‌ ಪಿಂಚಣಿಗೆ ಸಂಬಂಧಿಸಿದಂತೆ ಪ್ರಮುಖ ನಿಯಮ ಬದಲಾಯಿಸಿದ ಸರ್ಕಾರ!

ಇಪಿಎಸ್ ಅಡಿಯಲ್ಲಿ, 10 ವರ್ಷಗಳ ಮೊದಲು ಯೋಜನೆಯನ್ನು ತೊರೆದವರಿಗೆ ಹಿಂಪಡೆಯುವ ಸೌಲಭ್ಯವನ್ನು ನೀಡಲಾಗಿದೆ. ಆದರೆ 6 ತಿಂಗಳ ಮೊದಲು ಯೋಜನೆಯನ್ನು ತೊರೆದವರಿಗೆ ಅವರ ಕೊಡುಗೆಯ ಮೇಲೆ ಹಿಂಪಡೆಯುವ ಸೌಲಭ್ಯವನ್ನು ನೀಡುತ್ತಿರಲಿಲ್ಲ. ಆದರೆ, ಈಗ ಈ ನಿಯಮ ಬದಲಾಗಿದೆ.
 

Lakhs of EPFO members happy Government changed big rule regarding pension san
Author
First Published Jun 29, 2024, 2:08 PM IST

ನವದೆಹಲಿ (ಜೂ.29): ಕೇಂದ್ರ ಸರ್ಕಾರವು ಶುಕ್ರವಾರ ನೌಕರರ ಪಿಂಚಣಿ ಯೋಜನೆ (ಇಪಿಎಸ್), 1995 ರಲ್ಲಿ ಪ್ರಮುಖ ಬದಲಾವಣೆ ಮಾಡಿದೆ. ಈಗ 6 ತಿಂಗಳಿಗಿಂತ ಕಡಿಮೆ ಅವಧಿಗೆ ಕೊಡುಗೆ ನೀಡಿದ ಸದಸ್ಯರು ಕೂಡ ಹಣವನ್ನು ಹಿಂಪಡೆಯಲು ಸಾಧ್ಯವಾಗಲಿಎ. ಈ ಬದಲಾವಣೆಯು ಲಕ್ಷಾಂತರ ಇಪಿಎಸ್ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡಿದೆ. ಸಾಮಾನ್ಯವಾಗಿ ಪಿಪಿಎಸ್‌ನಲ್ಲಿ ಪಿಂಚಣಿಯನ್ನು ಪಡೆಯಲು 10 ವರ್ಷಗಳ ಸೇಎ ಅಗತ್ಯವಾಗಿದೆ. ಆದರೆ, ಪ್ರತಿ ವರ್ಷ ಲಕ್ಷಗಟ್ಟಲೆ ಜನರು 10 ವರ್ಷಗಳ ಕೊಡುಗೆಯನ್ನು ನೀಡುವ ಮುನ್ನವೇ ಯೋಜನೆಯನ್ನು ತೊರೆಯುತ್ತಾರೆ. ಅದರಲ್ಲೂ 6 ತಿಂಗಳೊಳಗೆ ಯೋಜನೆಯಿಂದ ನಿರ್ಗಮಿಸುವವರ ಸಂಖ್ಯೆ ಅಧಿಕವಾಗಿದೆ. ಇಪಿಎಸ್ ಅಡಿಯಲ್ಲಿ, 10 ವರ್ಷಗಳ ಮೊದಲು ಯೋಜನೆಯನ್ನು ತೊರೆಯುವವರಿಗೆ ಅವರ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ನೀಡಲಾಗಿದೆ. ಆದರೆ 6 ತಿಂಗಳ ಮೊದಲು ಯೋಜನೆಯನ್ನು ತೊರೆದವರಿಗೆ ಅವರ ಕೊಡುಗೆಯ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ನೀಡಿರಲಿಲ್ಲ. ಆದರೆ, ಈಗ ಈ ನಿಯಮವನ್ನು ಬದಲಾಯಿಸುವ ಮೂಲಕ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಹೊಸ ತಿದ್ದುಪಡಿಯು ಪ್ರತಿ ವರ್ಷ 7 ಲಕ್ಷಕ್ಕೂ ಹೆಚ್ಚು ಇಪಿಎಸ್ ಸದಸ್ಯರಿಗೆ ಪ್ರಯೋಜನವನ್ನು ನೀಡುತ್ತದೆ. 6 ತಿಂಗಳು ಹಾಗೂ ಅದಕ್ಕಿಂತ ಕಡಿಮೆ ಸಮಯ ಇಪಿಎಫ್‌ಗೆ ಹಣವನ್ನು ಸಲ್ಲಿಕೆ ಮಾಡುವವರು ಯೋಜನೆ ತೊರೆದ ಬಳಿಕ ಈಗ ಸಂಪೂರ್ಣ ಹಣ ಪಡೆಯಲು ಸಾಧ್ಯವಾಗಲಿದೆ.

ಈ ನಿಯಮದಲ್ಲೂ ಸರ್ಕಾರ ಬದಲಾವಣೆ ಮಾಡಿದೆ: ಜನೆಯನ್ನು ಉತ್ತಮಗೊಳಿಸಲು, ಸರ್ಕಾರವು ಇಪಿಎಸ್ ವಿವರಗಳಲ್ಲಿ ತಿದ್ದುಪಡಿಗಳನ್ನು ಮಾಡಿದೆ. ಇನ್ನು ಮುಂದೆ, ಹಿಂಪಡೆಯುವ ಪ್ರಯೋಜನವು ಸದಸ್ಯರು ಎಷ್ಟು ತಿಂಗಳು ಸೇವೆ ಸಲ್ಲಿಸಿದ್ದಾರೆ ಮತ್ತು ಸಂಬಳದಲ್ಲಿ ಎಷ್ಟು ಇಪಿಎಸ್ ಕೊಡುಗೆಯನ್ನು ನೀಡಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಯಮವು ಹಿಂಪಡೆಯುವಿಕೆಯನ್ನು ಸುಲಭಗೊಳಿಸುತ್ತದೆ. ಈ ಬದಲಾವಣೆಯಿಂದ 23 ಲಕ್ಷಕ್ಕೂ ಹೆಚ್ಚು ಇಪಿಎಸ್ ಸದಸ್ಯರು ಪ್ರಯೋಜನ ಪಡೆಯಲಿದ್ದಾರೆ.

ಹಿಂದಿನ ನಿಯಮ ಏನಿತ್ತು?: ಇಲ್ಲಿಯವರೆಗೆ, ಪೂರ್ಣಗೊಂಡ ವರ್ಷಗಳಲ್ಲಿ ಕೊಡುಗೆ ಸೇವೆಯ ಅವಧಿ ಮತ್ತು ಇಪಿಎಸ್ ಕೊಡುಗೆಯನ್ನು ಪಾವತಿಸಿದ ವೇತನದ ಆಧಾರದ ಮೇಲೆ ಹಿಂಪಡೆಯುವ ಪ್ರಯೋಜನವನ್ನು ಲೆಕ್ಕಹಾಕಲಾಗುತ್ತಿತ್ತು. 6 ತಿಂಗಳ ಅಥವಾ ಹೆಚ್ಚಿನ ಕೊಡುಗೆ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ಸದಸ್ಯರು ಅಂತಹ ಹಿಂಪಡೆಯುವ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಇದರ ಪರಿಣಾಮವಾಗಿ, 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕೊಡುಗೆ ನೀಡುವ ಮೊದಲು ಯೋಜನೆಯನ್ನು ತೊರೆದ ಸದಸ್ಯರು ಯಾವುದೇ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತಿರಲಿಲ್ಲ.

7 ಲಕ್ಷ ಕ್ಲೇಮ್‌ಗಳನ್ನು ತಿರಸ್ಕೃತ: ಹಳೆಯ ನಿಯಮದ ಕಾರಣದಿಂದಾಗಿ, ಅನೇಕ ಸದಸ್ಯರು 6 ತಿಂಗಳಿಗಿಂತ ಕಡಿಮೆ ಕೊಡುಗೆ ಸೇವೆಯಿಲ್ಲದೆ ನಿರ್ಗಮಿಸುತ್ತಿದ್ದರಿಂದ ಅನೇಕ ಕ್ಲೇಮ್‌ಗಳನ್ನು ತಿರಸ್ಕರಿಸಲಾಗಿತ್ತು. ಸರ್ಕಾರದ ಅಧಿಸೂಚನೆಯ ಪ್ರಕಾರ, 2023-24 ರ ಆರ್ಥಿಕ ವರ್ಷದಲ್ಲಿ 6 ತಿಂಗಳಿಗಿಂತ ಕಡಿಮೆ ಕೊಡುಗೆ ಸೇವೆಯ ಕಾರಣದಿಂದ ಹಿಂಪಡೆಯುವ ಪ್ರಯೋಜನದ ಸುಮಾರು 7 ಲಕ್ಷ ಕ್ಲೈಮ್‌ಗಳನ್ನು ತಿರಸ್ಕರಿಸಲಾಗಿದೆ. ಈಗ ಜೂನ್‌ 14 ರೊಳಗೆ 58 ವರ್ಷ ವಯಸ್ಸನ್ನು ತಲುಪದ ಈ ಇಪಿಎಸ್ ಸದಸ್ಯರು ಹಿಂಪಡೆಯುವ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ

ಇಪಿಎಸ್ ಎಂದರೇನು?: ಸಾಮಾನ್ಯವಾಗಿ ಜನರು ಇಪಿಎಸ್ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ವಾಸ್ತವವಾಗಿ ಇದು ಪಿಂಚಣಿ ಯೋಜನೆಯಾಗಿದ್ದು, ಇದನ್ನು ಇಪಿಎಫ್‌ಒ ನಿರ್ವಹಿಸುತ್ತದೆ. ಈ ಯೋಜನೆಯ ಅಡಿಯಲ್ಲಿ,  10 ವರ್ಷಗಳವರೆಗೆ ಕೊಡುಗೆಯನ್ನು ನೀಡಬೇಕು, ನಂತರ ನೀವು ನಿವೃತ್ತಿಯ ನಂತರ ಪಿಂಚಣಿಗೆ ಅರ್ಹರಾಗುತ್ತೀರಿ. ಅಸ್ತಿತ್ವದಲ್ಲಿರುವ ಮತ್ತು ಹೊಸ ಇಪಿಎಫ್ ಸದಸ್ಯರನ್ನು ಈ ಯೋಜನೆಯಡಿ ಸೇರಿಸಲಾಗಿದೆ. ಉದ್ಯೋಗದಾತ/ಕಂಪನಿ ಮತ್ತು ಉದ್ಯೋಗಿ ಇಬ್ಬರೂ ಉದ್ಯೋಗಿಯ ಸಂಬಳದ ಶೇ. 12ರಷ್ಟನ್ನು EPF ನಿಧಿಗೆ ಸಮಾನವಾಗಿ ಕೊಡುಗೆ ನೀಡುತ್ತಾರೆ. ಆದಾಗ್ಯೂ, ಉದ್ಯೋಗಿಯ ಕೊಡುಗೆಯ ಸಂಪೂರ್ಣ ಪಾಲು ಇಪಿಎಫ್‌ಗೆ ಹೋಗುತ್ತದೆ ಮತ್ತು ಉದ್ಯೋಗದಾತ/ಕಂಪನಿಯ ಪಾಲಿನಲ್ಲಿ 8.33% ಪ್ರತಿ ತಿಂಗಳು ನೌಕರರ ಪಿಂಚಣಿ ಯೋಜನೆ (ಇಪಿಎಸ್) ಮತ್ತು 3.67% ಇಪಿಎಫ್‌ಗೆ ಹೋಗುತ್ತದೆ. ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ನಿವೃತ್ತಿಯ ನಂತರ ಪಿಂಚಣಿ ಪ್ರಯೋಜನಗಳನ್ನು ನೀಡಲಾಗುತ್ತದೆ.

ಪಿಎಫ್‌ ಬಡ್ಡಿದರ ಶೇ. 8.25ಕ್ಕೆ ಹೆಚ್ಚಳ : 3 ವರ್ಷದ ಗರಿಷ್ಠ

Latest Videos
Follow Us:
Download App:
  • android
  • ios