ತುಮಕೂರಿನಲ್ಲಿ ನಡೆಯುತ್ತಿದೆ ಹೆಣ್ಣುಮಕ್ಕಳು ಬೆಚ್ಚಿ ಬೀಳುವಂತಹ ಕೃತ್ಯ : ಎಚ್ಚರ..!

First Published 2, Mar 2018, 2:22 PM IST
Ladies Kidnap And Rape In Tumkur
Highlights

ತುಮಕೂರಿನ ಪಾವಗಡದಲ್ಲಿ ನಡೆಯುತ್ತಿದೆ ಅಂಧ ದರ್ಬಾರ್. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಂತೆ ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ನಡೆಸುತ್ತಿರುವ ಹೇಯ ಕೃತ್ಯ ಬೆಳಕಿಗೆ ಇಲ್ಲಿ ಬಂದಿದೆ.

ತುಮಕೂರು : ತುಮಕೂರಿನ ಪಾವಗಡದಲ್ಲಿ ನಡೆಯುತ್ತಿದೆ ಅಂಧ ದರ್ಬಾರ್. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಂತೆ ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ನಡೆಸುತ್ತಿರುವ ಹೇಯ ಕೃತ್ಯ ಬೆಳಕಿಗೆ ಇಲ್ಲಿ ಬಂದಿದೆ.

ಮಾಜಿ ಶಾಸಕರೊಬ್ಬರ ಬೆಂಬಲಿಗರಿಂದ  ದೌರ್ಜನ್ಯ ನಡೆಯುತ್ತಿದೆ. ಅಂಗನವಾಡಿ ಟೀಚರ್ ಪಾತ್ರೆ ತೊಳೆಯುವಾಗ ಕಿಡ್ನಾಪ್ ಮಾಡಿ ಗಂಡನ ಎದುರೇ ಎಳೆದಾಡಿದ್ದಾರೆ. ಬಾರದಿದ್ದಲ್ಲಿ ನಡುರಸ್ತೆಯಲ್ಲಿ ಅತ್ಯಾಚಾರ ಎಸಗುವುದಾಗಿ ಬೆದರಿಕೆಯನ್ನು ಹಾಕಲಾಗುತ್ತಿದೆ.

ಈ ಬಗ್ಗೆ ನೊಂದ ಮಹಿಳೆಯೋರ್ವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಹೆಣ್ಣು ಮಕ್ಕಳನ್ನು ಐದಾರು ದಿನಗಳ ಕಾಲ  ಹೊತ್ತೊಯ್ದು ನಂತರ ವಾಪಸ್ ಕರೆತಂದು ಬಿಡಲಾಗಿದೆ. ಈ ಬಗ್ಗೆ ಪೊಲೀಸರು ಸಹ ದೂರನ್ನು ದಾಖಲಿಸಿಕೊಳ್ಳುವುದಿಲ್ಲ.

ಇಂತಹ ಹೇಯ ಕೃತ್ಯ ನಡೆಯುತ್ತಿದ್ದರೂ ಕೂಡ ಇಲ್ಲಿನ ಹೆಣ್ಣುಮಕ್ಕಳು ಈ ವಿಚಾರವನ್ನು ಬಾಯಿ ಬಿಡಲು ಹೆದರುತ್ತಿದ್ದಾರೆ. ಸದ್ಯ ಇಂತಹ ಐದು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಘಟನೆಯ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮಾಹಿತಿ ಪಡೆದು  ಮಹಿಳೆಯರನ್ನು ರಕ್ಷಿಸಿದ್ದಾರೆ.

loader