ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ನಡೆದ ಭೀಕರ ಉಗ್ರ ದಾಳಿ ರೂವಾರಿಯ ಪುತ್ರಿಯೊಂದಿಗೆ, ಬಿನ್ ಲಾಡೆನ್ ಪುತ್ರ ವಿವಾಹವಾಗಿದ್ದಾನೆ. ಉಗ್ರರಿಗೆ ಉಗ್ರರೊಂದಿಗೆ ಸಂಬಂಧ ಬೆಳೆಸುವುದ ಬಿಟ್ಟು, ಬೇರೆಯವರೊಂದಿಗೆ ಬಾಂಧವ್ಯ ಬೆಳೆಸಲು ಹೇಗೆ ತಾನೇ ಸಾಧ್ಯ?

ಲಂಡನ್: ಅಮೆರಿಕದಲ್ಲಿ 2001ರಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿ (9/11) ಪ್ರಮುಖ ರೂವಾರಿ, ಅಲ್‌ಖೈದಾ ನಾಯಕ ಒಸಾಮ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‌ಗೆ ಮದುವೆಯಾಗಿದೆ.

ವಿಶೇಷವೆಂದರೆ ಈ ದಾಳಿಗೆ ವಿಮಾನ ಅಪಹರಿಸಿದ್ದ ಮೊಹಮ್ಮದ್ ಅಟ್ಟಾನ ಮಗಳನ್ನು ಹಮ್ಜಾ ಮದುವೆಯಾಗಿದ್ದಾನೆ. ವಿವಾಹದ ಸುದ್ದಿ ಯನ್ನು ಲಾಡೆನ್‌ನ ಸೋದರ ಸಂಬಂಧಿಗಳು ಬಹಿರಂಗಪಡಿಸಿದ್ದಾರೆ. 

ಆದರೆ, ಹಮ್ಜಾ ಎಲ್ಲಿದ್ದಾನೆ ಎಂಬ ಮಾಹಿತಿ ನೀಡಿಲ್ಲ. ಲಾಡೆನ್ ಸಾವಿನ ಬಳಿಕ ಹಮ್ಜಾ ಅಲ್‌ಖೈದಾ ಸಂಘಟನೆ ನೇತೃತ್ವ ವಹಿಸಿದ್ದಾನೆ ಎನ್ನಲಾಗಿದೆ. ಅಮೆರಿಕ ಗುಪ್ತಚರ ಸಂಸ್ಥೆಗಳು ಆತನ ಮಾಹಿತಿ ಸಂಗ್ರಹಿಸುತ್ತಿವೆ.