ಜೂನ್‌ 8ರಂದು ನಡೆಯಲಿರುವ ಬ್ರಿಟನ್‌ ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ನ ಲ್ಯಾಂಬೆತ್‌ ನಗರದ ಮಾಜಿ ಮಹಾಪೌರ, ಕನ್ನಡಿಗ ನೀರಜ್‌ ಪಾಟೀಲ್‌ ಅವರು ಲೇಬರ್‌ ಪಕ್ಷದ ಹುರಿಯಾಳಾಗಿ ಕಣಕ್ಕಿಳಿಯಲಿದ್ದಾರೆ. ನೈಋುತ್ಯ ಲಂಡನ್‌ನ ಪುಟ್ನಿ ಎಂಬ ಕ್ಷೇತ್ರದಿಂದ ನೀರಜ್‌ ಪಾಟೀಲ್‌ ಅವರು ಬ್ರಿಟನ್‌ನ ಹಾಲಿ ಶಿಕ್ಷಣ ಮಂತ್ರಿ, ಕನ್ಸರ್ವೇಟಿವ್‌ ಪಕ್ಷದ ಜಸ್ಟಿನ್‌ ಗ್ರೀನಿಂಗ್‌ ಅವರ ವಿರುದ್ಧ ಸೆಣಸಲಿದ್ದಾರೆ.
ಲಂಡನ್(ಮೇ.12): ಜೂನ್ 8ರಂದು ನಡೆಯಲಿರುವ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್ನ ಲ್ಯಾಂಬೆತ್ ನಗರದ ಮಾಜಿ ಮಹಾಪೌರ, ಕನ್ನಡಿಗ ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ ಹುರಿಯಾಳಾಗಿ ಕಣಕ್ಕಿಳಿಯಲಿದ್ದಾರೆ. ನೈಋುತ್ಯ ಲಂಡನ್ನ ಪುಟ್ನಿ ಎಂಬ ಕ್ಷೇತ್ರದಿಂದ ನೀರಜ್ ಪಾಟೀಲ್ ಅವರು ಬ್ರಿಟನ್ನ ಹಾಲಿ ಶಿಕ್ಷಣ ಮಂತ್ರಿ, ಕನ್ಸರ್ವೇಟಿವ್ ಪಕ್ಷದ ಜಸ್ಟಿನ್ ಗ್ರೀನಿಂಗ್ ಅವರ ವಿರುದ್ಧ ಸೆಣಸಲಿದ್ದಾರೆ.
ನೀರಜ್ ಪಾಟೀಲ್ ಅವರು ಕಲಬುರಗಿ ಜಿಲ್ಲೆಯ ಕಮಲಾಪುರದವರಾಗಿದ್ದು, ಅಪಘಾತ ಮತ್ತು ತುರ್ತು ವೈದ್ಯಕೀಯ ಸೇವೆಯ ಸಲಹೆಗಾರರಾಗಿದ್ದಾರೆ. ಗ್ರೀನ್ಬರ್ಗ್ ಅವರು ಈ ಕ್ಷೇತ್ರದ ಪುಟ್ನಿ ಕ್ಷೇತ್ರದಿಂದ 2005ರಿಂದ ಆಯ್ಕೆಯಾಗುತ್ತಿದ್ದು, ಪಾಟೀಲ್ ಅವರಿಂದ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
ಪಾಟೀಲ್ ಅವರು ಲ್ಯಾಂಬೆತ್ ಮೇಯರ್ ಆಗಿ ಸಾಕಷ್ ಟುಹೆಸರುವಾಸಿಯಾಗಿದ್ದಾರೆ. ಅಲ್ಲದೆ, ಜಗಜ್ಯೋತಿ ಬಸವೇಶ್ವರ ಅವರ ಪ್ರತಿಮೆಯನ್ನು ಬ್ರಿಟನ್ನಲ್ಲಿ ಸ್ಥಾಪಿಸಿ ಜನಾನುರಾಗಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಪುತ್ಥಳಿಯನ್ನು ನ.14, 2015ರಂದು ಅನಾವರಣ ಗೊಳಿಸಿದ್ದರು.
