Asianet Suvarna News Asianet Suvarna News

ಸ್ವಾಮೀಜಿಗಳ ನಡೆಗೆ ಈಶ್ವರಪ್ಪ ಅಸಮಧಾನ

ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವವರ ಹಿಡಿತಕ್ಕೆ ರಾಜ್ಯವು ಹೋಗುತ್ತಿದ್ದು, ರಾಜಕಾರಣವನ್ನು ದುರುಪಯೋಗ ಮಾಡಿಕೊಳ್ಳುವ ಮಠಗಳ ವಿರುದ್ಧ ಎಚ್ಚರ ವಹಿಸಬೇಕು ಎಂದು ಸ್ವಾಮೀಜಿಗಳ ನಡೆಯ ಬಗ್ಗೆ ಶಾಸಕ ಕೆ.ಎಸ್‌.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

KS Eshwarappa Unhappy About Swamiji's Politics InterFerens

ವಿಧಾನಸಭೆ :  ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವವರ ಹಿಡಿತಕ್ಕೆ ರಾಜ್ಯವು ಹೋಗುತ್ತಿದ್ದು, ರಾಜಕಾರಣವನ್ನು ದುರುಪಯೋಗ ಮಾಡಿಕೊಳ್ಳುವ ಮಠಗಳ ವಿರುದ್ಧ ಎಚ್ಚರ ವಹಿಸಬೇಕು ಎಂದು ಸ್ವಾಮೀಜಿಗಳ ನಡೆಯ ಬಗ್ಗೆ ಶಾಸಕ ಕೆ.ಎಸ್‌.ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಪ್ರಜಾಪ್ರಭುತ್ವದ ಈ ದೇವಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಡಿ’ ಎಂದೂ ಅವರು ಮನವಿ ಮಾಡಿದ್ದಾರೆ.

ಮಂಗಳವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ಜಾತಿ-ಜಾತಿ ಹೆಸರಲ್ಲಿ ಸ್ವಾಮೀಜಿಗಳ ಬಡಿದಾಟ ಹೆಚ್ಚಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕುರುಬ ಸ್ವಾಮೀಜಿಗಳು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪರ ಒಕ್ಕಲಿಗ ಸ್ವಾಮೀಜಿಗಳು ಹೇಳಿಕೆಗಳನ್ನು ನೀಡಿ ವಾಕ್ಸಮರ ಮಾಡುತ್ತಿದ್ದಾರೆ. ಕೆಲವು ಸ್ವಾಮೀಜಿಗಳು ಸಮಾಜದಲ್ಲಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಜಾತಿಗಳ ನಡುವೆ ವಿಷ ಬೀಜ ಬಿತ್ತುವವರ ಹಿಡಿತಕ್ಕೆ ರಾಜ್ಯಕ್ಕೆ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸ್ವಾಮೀಜಿಗಳು ಎಂದರೆ ದೇವರ ಸಮಾನ ಎಂದು ಭಾವಿಸುತ್ತೇವೆ. ಎಲ್ಲಾ ಜಾತಿಗಳ ಭಕ್ತಾದಿಗಳು ಅವರ ಬಳಿ ಹೋಗುತ್ತಾರೆ. ಸ್ವಾಮೀಜಿಗಳು ಎಲ್ಲವನ್ನೂ ತ್ಯಾಗ ಮಾಡಿರುವ ತ್ಯಾಗಿಗಳು. ಹೀಗಾಗಿ ಅವರು ರಾಜಕಾರಣಕ್ಕೆ ಬರಬಾರದು ಎಂದು ಮನವಿ ಮಾಡಿಕೊಂಡ ಅವರು, ಕೆಲವು ಮಠಗಳು ರಾಜಕಾರಣವನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ. ಅಂತಹ ಮಠಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

ಬಿಜೆಪಿ ಆಡಳಿತಾವಧಿಯಲ್ಲಿ ಜಾತಿಯನ್ನು ನೋಡದೆ 39 ಮಠಗಳಿಗೆ 97 ಕೋಟಿ ರು. ಅನುದಾನ ನೀಡಲಾಗಿತ್ತು. ಎಲ್ಲಾ ಸಮಾಜದ ಮಠಗಳನ್ನು ಸಮಾನವಾಗಿ ಕಾಣಲಾಗಿತ್ತು. ಆಗ ಪ್ರಸ್ತುತ ಉದ್ಭವವಾಗಿರುವ ಸಮಸ್ಯೆಗಳು ಇರಲಿಲ್ಲ. ಆದರೆ, ಈಗ ಅವಕಾಶವಾದಿ ರಾಜಕಾರಣಕ್ಕಾಗಿ ಜಾತಿ ರಾಜಕಾರಣವನ್ನು ಮಾಡಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಪ್ರಜಾಪ್ರಭುತ್ವ ದೇವಸ್ಥಾನದಲ್ಲಿ ನಿಂತು ಹೇಳುತ್ತಿದ್ದೇನೆ. ಸ್ವಾಮೀಜಿಗಳು ರಾಜಕಾರಣಕ್ಕೆ ಬರಬೇಡಿ ಎಂದು ಈಶ್ವರಪ್ಪ ಮನವಿ ಮಾಡಿದರು.

ಹಿಂದುಳಿದ ವರ್ಗದ 36 ಸಮಾಜಗಳಿಗೆ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ಸಮಾಜಗಳ ಅಗತ್ಯಕ್ಕೆ ತಕ್ಕಂತೆ 78 ಎಕರೆ ಜಮೀನು ನೀಡುವ ಅಶ್ವಾಸನೆ ನೀಡಲಾಗಿತ್ತು. ಆದರೆ, ಕಾರಣಾಂತರಗಳಿಂದಾಗಿ ಇದಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಯಿತು. ಹೀಗಾಗಿ 36 ಸಮಾಜಗಳಿಗೆ ಪರ್ಯಾಯ ಭೂಮಿ ಕಲ್ಪಿಸಿಕೊಡಬೇಕು ಅಥವಾ ಅದರ ಮೌಲ್ಯವನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios