ಮಂಡ್ಯ [ಆ.10]: ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ ಅಣೆಕಟ್ಟೆ(ಕೆಆರ್‌ಎಸ್‌) ನೀರಿನ ಮಟ್ಟ100 ಅಡಿ ಗಡಿ ದಾಟಿದೆ. ಅಣೆಕಟ್ಟೆಯ ಒಟ್ಟು ಎತ್ತರ 124.80 ಅಡಿ ಇದ್ದು, ಭರ್ತಿಯಾಗಲು ಇನ್ನು 22.80 ಅಡಿ ಬಾಕಿ ಇದೆ. 

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಕಳೆದ ನಾಲ್ಕೈದು ದಿನಗಳಿಂದ ಕೆಆರ್‌ಎಸ್‌ಗೆ ಒಳ ಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ 73,284 ಸಾವಿರಕ್ಕೂ ಅಧಿಕ ಕ್ಯುಸೆಕ್‌ ಒಳ ಹರಿವು ಬಂದಿದ್ದು, ಒಂದೇ ದಿನ 9 ಅಡಿ ನೀರು ಏರಿಕೆಯಾಗಿದೆ. ಆ.8ರ ಸಂಜೆ ವೇಳೆಗೆ ಜಲಾಶಯದಲ್ಲಿ 93.50 ಅಡಿ ಇದ್ದ ನೀರು ಆ.9ರ ಸಂಜೆ ವೇಳೆಗೆ 102 ಅಡಿ ತಲುಪಿದೆ. ಮುಂದಿನ ಎಂಟತ್ತು ದಿನ ಇದೇ ಪ್ರಮಾಣದ ಒಳ ಹರಿವು ಹರಿದು ಬಂದರೆ ಜಲಾಶಯ ಭರ್ತಿಯಾಗಲಿದೆ.