ಹೈಟೆಕ್ ಗಾಂಜಾ ಮಾರಾಟ ಗ್ಯಾಂಗನ್ನು ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 30 ಕೆಜಿ ಗಾಂಜಾ, ಒಂದು ಇನ್ನೋವಾ ಕಾರು, 5 ಲಕ್ಷ ರೂ.ಹಣ ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು (ಜ.29): ಹೈಟೆಕ್ ಗಾಂಜಾ ಮಾರಾಟ ಗ್ಯಾಂಗನ್ನು ಬಂಧಿಸುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 30 ಕೆಜಿ ಗಾಂಜಾ, ಒಂದು ಇನ್ನೋವಾ ಕಾರು, 5 ಲಕ್ಷ ರೂ.ಹಣ ವಶಪಡಿಸಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ರಾಚಪ್ಪ ಕಟ್ಟಡಗಳಲ್ಲಿ ಸೆಟ್ರಿಂಗ್ ಕೆಲಸ ಮಾಡುತ್ತಾ ಗಾಂಜಾ ಮಾರಾಟ ಮಾಡುತಿದ್ದ. ತನ್ನ ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ. ಗಾಂಜಾ ಮಾರಾಟದಿಂದಲೇ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದ. ತಲಘಟ್ಟಪುರ ಬಳಿಯ ಐಷಾರಾಮಿ ಅಪಾರ್ಟ್'ಮೆಂಟ್​​​'ನಲ್ಲಿ ವಾಸವಿದ್ದ ರಾಚಪ್ಪ ಅಪಾರ್ಟ್'ಮೆಂಟ್'ನಲ್ಲೇ ಗಾಂಜಾ ಡೀಲ್ ಮಾಡುತ್ತಿದ್ದ.

ಆರೋಪಿ ಸಲ್ಲಿಸಿದ್ದ 40 ಲಕ್ಷ ಐಟಿ ರಿಟರ್ನ್ಸ್​​ ನೋಡಿ ಐಟಿ ಇಲಾಖೆ ಅಧಿಕಾರಿಗಳು ತಬ್ಬಿಬ್ಬಾದರು. ಆದಾಯದ ಮೂಲವನ್ನು ಕೆದಕಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾರೆ.