ಸೋಸಲೆ ಮಠದ ಪೀಠಾಧೀಪತಿ ವಿದ್ಯಾಶ್ರೀಶ ತೀರ್ಥರ ಆಡಳಿತಾತ್ಮಕ ವ್ಯಾಜ್ಯದ ಹಿನ್ನಲೆ ವಿದ್ಯಾವಿಜಯರನ್ನು ಮಠದ ಉತ್ತರಾಧಿಕಾರಿಯಾಗಿ ಹೈಕೋರ್ಟ್ ನೇಮಿಸಿತ್ತು. ಅಲ್ಲದೆ ಇಬ್ಬರು ಶ್ರೀಗಳಗೆ ಪೂಜೆ ಮಾಡಲು ಸೂಚಿಸಿತ್ತು.
ಕೊಪ್ಪಳ(ಅ.06): ತುಳಸಿ ಹಾರ ಹಾಕುವ ವಿಚಾರಕ್ಕೆ ಜಿಲ್ಲೆಯ ಗಂಗಾವತಿ ತಾಲೂಕಿನ ನವ ವೃಂದಾವನ ಗಡ್ಡೆಯಲ್ಲಿ ಕೆಲ ದಿನಗಳ ಹಿಂದೆ ಇಬ್ಬರು ಸ್ವಾಮೀಜಿಗಳ ನಡುವೆ ಗಲಾಟೆ ನಡೆದಿದೆ.
ನವವೃಂದಾವನದಲ್ಲಿ ರಾಮತೀರ್ಥರ ಪೂಜೆಗಾಗಿ ಸೋಸಲೆ ಮಠದ ಶ್ರೀಗಳ ಇಬ್ಬರು ಶಿಷ್ಯರ ನಡುವೆ ನಿನ್ನೆ ವಾಗ್ವಾದ ನಡೆದಿದೆ. ಆನೆಗುಂದಿಯ ನವವೃಂದಾವನ ಗಡ್ಡೆಯಲ್ಲಿ ಮಧ್ಯಾರಾಧನೆ ಆರಂಭವಾಗಿತ್ತು. ಸೋಸಲೆ ಮಠದ ಪೀಠಾಧೀಪತಿ ವಿದ್ಯಾಶ್ರೀಶ ತೀರ್ಥರ ಆಡಳಿತಾತ್ಮಕ ವ್ಯಾಜ್ಯದ ಹಿನ್ನಲೆ ವಿದ್ಯಾವಿಜಯರನ್ನು ಮಠದ ಉತ್ತರಾಧಿಕಾರಿಯಾಗಿ ಹೈಕೋರ್ಟ್ ನೇಮಿಸಿತ್ತು.
ಅಲ್ಲದೆ ಇಬ್ಬರು ಶ್ರೀಗಳಗೆ ಪೂಜೆ ಮಾಡಲು ಸೂಚಿಸಿತ್ತು.ಈ ಹಿನ್ನಲೆಯಲ್ಲಿ ಇಬ್ಬರು ಮಠಾಧೀಶರು ನವವೃಂದಾವನ ಗಡ್ಡೆಗೆ ಆಗಮಿಸಿದ್ದಾರೆ. ಪೂಜೆ ಆರಂಭವಾಗಿ ಕೊನೆಯ ಹಂತಕ್ಕೆ ಬಂದಾಗ ತುಳಸಿ ಹಾರ ಹಾಕುವ ವಿಚಾರವಾಗಿ ಇಬ್ಬರು ಶ್ರೀಗಳ ಶಿಷ್ಯರ ಮಧ್ಯೆ ವಾಗ್ವಾದ ನಡೆದಿದೆ. ಇಬ್ಬರು ಶ್ರೀಗಳ ಮಧ್ಯೆ ವಾಗ್ವಾದ ನಡೆದಾಗ ವಿದ್ಯಾಶ್ರೀಶ ತೀರ್ಥರು ಮನನೊಂದು ಹೊಸಪೇಟೆಗೆ ತೆರಳಿ ಕೋರ್ಟ್ ಮೂಲಕ ಬಗೆಹರಿಸುವದಾಗಿ ತಿಳಿಸಿದ್ದಾರೆ.
