20 ನೇ ಮಹಡಿಯಿಂದ ಜಿಗಿದರೂ ಈ ಹಾಸಿಗೆ ನಿಮ್ಮನ್ನೂ ರಕ್ಷಿಸುತ್ತದೆ | ಕೋಲ್ಕತ್ತಾ ಇಂಥ ವಿಶೇಷ ಹಾಸಿಗೆ ಹೊಂದಿದ ದೇಶದ ಮೊದಲ ನಗರವಾಗಿ ಹೊರ ಹೊಮ್ಮಿದೆ | 

ಕೋಲ್ಕತ್ತಾ (ಡಿ. 24): 20 ನೇ ಮಹಡಿಯ ಕಟ್ಟಡದಿಂದ ಜಿಗಿದರೂ ಪ್ರಾಣಾಪಾಯದಿಂದ ಪಾರು ಮಾಡುವಂಥ ವಿಶೇಷ ಹಾಸಿಗೆಯು ಇದೀಗ ಪಶ್ಚಿಮ ಬಂಗಾಳದ ಕೋಲ್ಕತ್ತಾ ವಿಪತ್ತು ನಿರ್ವಹಣಾ ತಂಡಕ್ಕೆ ಸೇರ್ಪಡೆಯಾಗಿದೆ. ಈ ಮೂಲಕ ಕೋಲ್ಕತ್ತಾವು ಇಂಥ ವಿಶೇಷ ಹಾಸಿಗೆ ಹೊಂದಿದ ದೇಶದ ಮೊದಲ ನಗರವಾಗಿ ಹೊರ ಹೊಮ್ಮಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋಲ್ಕತ್ತಾವು ಹಳೇ ನಗರವಾಗಿರುವುದರಿಂದ, ಯಾವುದೇ ತುರ್ತು ಸಂದರ್ಭಗಳಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ದೊಡ್ಡ ದೊಡ್ಡ ಏಣಿಗಳ ಬಳಕೆ ಸಾಧ್ಯವಿಲ್ಲ. ಹೀಗಾಗಿ ಈ ವಿಶೇಷ ಹಾಸು ಹೆಚ್ಚು ಮಹತ್ವ ಪಡೆದಿದೆ. ಯಾವುದೇ ದುರ್ಘಟನೆ ನಡೆದ ಕಟ್ಟಡದಲ್ಲಿ 4 ಜನರ ತಂಡ ಕೇವಲ 80 ಸೆಕೆಂಡ್‌ಗಳಲ್ಲಿ ಈ ವಿಶೇಷ ಹಾಸನ್ನು ರಕ್ಷಣಾ ಕಾರ್ಯಾ ಚರಣೆಗೆ ಬಳಸಬಹು ದಾಗಿದೆ. ಅಗ್ನಿ ಆಕಸ್ಮಿಕದಂಥ ಸಂದರ್ಭದಲ್ಲಿ ಕಟ್ಟಡದಿಂದ ಮೇಲಿಂದ ಜಿಗಿಯುವವರ ಪ್ರಾಣ ರಕ್ಷಣೆಗೆ ಇದು ಸಹಕಾರಿ.