ಬೆಂಗಳೂರು[ಆ.18]  ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಜತೆ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು ರಾಜ್ಯದ ಮನವಿಗೆ ಸ್ಪಂದಿಸಿದ್ದಾರೆ. ರಕ್ಷಣಾ ಇಲಾಖೆಯಿಂದ ಮತ್ತಷ್ಟು ಅಧಿಕಾರಿಗಳ ನಿಯೋಜನೆಗೆ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ. 

ಕೇಂದ್ರ ರಕ್ಷಣಾ ಸಚಿವರ ಜತೆ ದೂರವಾಣೆಯಲ್ಲಿ ಚರ್ಚೆ ನಡೆಸಿರುವ ಸಿಎಂ ಪ್ರವಾಹ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟಿದ್ದಾರೆ.  ಸಮಸ್ಯೆಗಳನ್ನು ವಿವರಿಸಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಿಎಂ ಪತ್ರ ಸಹ ಬರೆದಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವವರಿಗೆ ಸಹಾಯವಾಣಿ

ಕೊಡಗಿನಲ್ಲಿ ವಾಯು ಸೇನಾ ಅಧಿಕಾರಿಗಳಿಂದ ಸಾವಿರಕ್ಕೂ ಹೆಚ್ಚು ಸಂತ್ರಸ್ತರ ರಕ್ಷಣೆ ಮಾಡಲಾಗಿದೆ.  ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಲು ಸಿಎಂ ಮನವಿ ಮಾಡಿದ್ದಾರೆ.