ನಟ ಜಗ್ಗೇಶ್​​ ಹಿರಿಯ ಪುತ್ರ ಗುರುರಾಜ್'ಗೆ ಚಾಕು ಇರಿಯಲಾಗಿದೆ. ಬೆಂಗಳೂರಿನ ಆರ್​.ಟಿ.ನಗರದಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ಬೆಂಗಳೂರು(ಆ.14): ನಟ ಜಗ್ಗೇಶ್​​ ಹಿರಿಯ ಪುತ್ರ ಗುರುರಾಜ್'ಗೆ ಚಾಕು ಇರಿಯಲಾಗಿದೆ. ಬೆಂಗಳೂರಿನ ಆರ್​.ಟಿ.ನಗರದಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ಮಗನನ್ನು ಶಾಲೆಗೆ ಬಿಡಲು ಹೋದಂತಹ ಸಂದರ್ಭದಲ್ಲಿ ಆರ್​.ಟಿ.ನಗರದಲ್ಲಿ ಟ್ರಾಫಿಕ್​ ವಿಚಾರವಾಗಿ ನಡೆದ ಗಲಾಟೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗುರುರಾಜ್​ ಕಾಲಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡಿರುವ ಜಗ್ಗೇಶ್ ಪುತ್ರ ಗುರುರಾಜ್'ಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಈ ವಿಚಾರವಾಗಿ ಪೊಲೀಸರಿಗೆ ಹೇಳಿಕೆ ನೀಡಿರುವ ಗುರುರಾಜ್ ಟ್ರಾಫಿಕ್ ವಿಚಾರದಲ್ಲಾದ ಘಟನೆ ವಿಕೋಪಕ್ಕೆ ತೆರಳಿ ದುಷ್ಕರ್ಮಿಗಳು ಚಾಕವಿನಿಂದ ಇರಿದಿದ್ದಾರೆ ಎಂದಿದ್ದಾರೆ. ಇವರ ಹೇಳಿಕೆಯನ್ನು ಪಡೆದಿರುವ ಆರ್. ಟಿ ನಗರ ಪೊಲೀಸರು ಹಲ್ಲ ಪ್ರಕರಣದಡಿ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.