ರಾಜ್ಯದಲ್ಲಿ ಬಿಜೆಪಿಯಿಂದ ಯಡಿಯೂರಪ್ಪ, ಜೆಡಿಎಸ್'ನಿಂದ ದೇವೇಗೌಡರು ಹಾಗೂ ಕಾಂಗ್ರೆಸ್'ನಿಂದ ಸಿದ್ದರಾಮಯ್ಯ ಅವರಿಗೆ ಮಾತ್ರ ಮತ ಸೆಳೆಯುವ ಶಕ್ತಿಯಿದೆ.

ಮಧುಗಿರಿ(ಸೆ.21): ಕಾಂಗ್ರೆಸ್ ಪಾರ್ಟಿ ಕಳ್ಳರ ಪಾರ್ಟಿಯಿದ್ದಂಗೆ. ಯಾರು ಚನ್ನಾಗಿ ಕೆಲಸ ಮಾಡ್ತಾರೋ ಅವರ ಮೇಲೆ ನಾಯಕರು ಕಣ್ಣಿಟ್ಟಿರುತ್ತಾರೆ ಎಂದು ಕಾಂಗ್ರೆಸ್ ಶಾಸಕ ಸ್ವಂತ ಪಕ್ಷದ ವಿರುದ್ಧವೆ ಹರಿಹಾಯ್ದಿದ್ದಾರೆ.

ಮಧುಗಿರಿಯ ತಿಮ್ಲಾಪುರ ಗ್ರಾಮದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಸಮಾಧಾನ ತೋಡಿಕೊಂಡ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡೋರ ವಿಚಾರದಲ್ಲಿ ಕಣ್ಣಿಟ್ಟಿರ್ತಾರೆ ಎಂದು ಕಾಂಗ್ರೆಸ್ ಪಾಳೆಯದಲ್ಲಿನ ತಮ್ಮ ಅಸಮಧಾನ ಹೊರಹಾಕಿದರು.

ರಾಜ್ಯದಲ್ಲಿ ಬಿಜೆಪಿಯಿಂದ ಯಡಿಯೂರಪ್ಪ, ಜೆಡಿಎಸ್'ನಿಂದ ದೇವೇಗೌಡರು ಹಾಗೂ ಕಾಂಗ್ರೆಸ್'ನಿಂದ ಸಿದ್ದರಾಮಯ್ಯ ಅವರಿಗೆ ಮಾತ್ರ ಮತ ಸೆಳೆಯುವ ಶಕ್ತಿಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಕೆಲಸ ಮಾಡಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.