ಸ್ವಂತ ಪಕ್ಷವನ್ನು ಟೀಕಿಸಿದ ಶಾಸಕನಿಂದ ಮತ್ತೊಂದು ವಿವಾದಿತ ಹೇಳಿಕೆ
ಕೆಲ ದಿನಗಳ ಹಿಂದಷ್ಟೆ ಸ್ವಂತ ಪಕ್ಷವನ್ನು ಟೀಕಿಸಿದ ಮಧುಗಿರಿ ಶಾಸಕ ರಾಜಣ್ಣ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾನು ಕುಡಿಯೋನೇ..! ದಿನಾ ಕುಡೀತೀನಿ..!ನಾನು ಕುಡಿಯೋ ವಿಚಾರದಲ್ಲಿ ಅನುಮಾನ ಪಡಲೇ ಬೇಡಿ..!ನನ್ನ ದುಡ್ಡಲ್ಲಿ ನಾನು ಕುಡಿಯುತ್ತೇನೆ, ಬೇರೆಯವರ ದುಡ್ಡಲ್ಲಿ ಕುಡಿಯಲ್ಲ..! ಮದ್ಯಪಾನ ನಿಷೇಧದಿಂದ ಅನಾಹುತವೇ ಜಾಸ್ತಿಯಾಗುತ್ತೆ. ದೇವರು ಕುಡಿದರೆ ಸುರಪಾನ, ನಾವು ಕುಡಿದರೆ ಮದ್ಯಪಾನವೇ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಪಾತ್ರರಾಗಿದ್ದಾರೆ.
