ಮಾಧ್ಯಮದವರು ಮತ್ತು ಚಲನ ಚಿತ್ರ ವಾಣಿಜ್ಯ ಮಂಡಳಿ,ನಿರ್ಮಾಪಕ ಸಂಘ ಇಂತಹ ಕಲಾವಿದರಿಗೆ ಸಪೋರ್ಟ್ ಮಾಡಲೇ ಬಾರದು

ಕಿರಿಕ್ ಪಾರ್ಟಿ ಚಿತ್ರದ ಸಂಯುಕ್ತಾ ಹೆಗಡೆ ನಿಜಕ್ಕೂ ಕಿರಿಕ್ಕೇ ಬಿಡಿ.ಯಾಕೆಂದ್ರೆ, ಕಾಲೇಜ್ ಕುಮಾರ್ ಚಿತ್ರದ ನಿರ್ಮಾಪಕ ಪದ್ಮನಾಭ್ ಈಗ ಸಂಯುಕ್ತಾ ಮಾಡಿರೊ ಕಿರಿಕ್ ಗಳನ್ನ ಹೊರ ಹಾಕಿದ್ದಾರೆ. ಚಿತ್ರ ಆರಂಭದ ದಿನದಿಂದಲೂ ಸಂಯುಕ್ತಾ ಸಪೋರ್ಟ್ ಮಾಡಿಯೇ ಇಲ್ಲ. ಚಿತ್ರ ರಿಲೀಸ್ ಆದ್ಮೇಲೂ ಪ್ರಚಾರಕ್ಕೆ ಬಂದಿಲ್ಲ. ಚಿತ್ರ ಕೇವಲ ಒಬ್ಬರಿಂದಲೇ ಆಗೋದಿಲ್ಲ. ಅದಕ್ಕೆ ಎಲ್ಲರ ಸಪೋರ್ಟ್ ಬೇಕು. ಸಂಯುಕ್ತಾ ಹೆಗಡೆ ಅದನ್ನ ಮಾಡಿಯೇ ಇಲ್ಲ. ಮಾಧ್ಯಮದವರು ಮತ್ತು ಚಲನ ಚಿತ್ರ ವಾಣಿಜ್ಯ ಮಂಡಳಿ,ನಿರ್ಮಾಪಕ ಸಂಘ ಇಂತಹ ಕಲಾವಿದರಿಗೆ ಸಪೋರ್ಟ್ ಮಾಡಲೇ ಬಾರದು.

ಇವರನ್ನ ಹಾಕಿಕೊಂಡು ಸಿನಿಮಾ ಮಾಡೋ ನಿರ್ಮಾಪಕರಿಗೆ ತೊಂದರೆ ಕಂಡಿತ ಆಗುತ್ತದೆ. ಹಾಗಾಗಿಯೇ ಈಗ ಸಯುಂಕ್ತಾ ವಿರುದ್ದ ಫಿಲ್ಮಂ ಚೇಂಬರ್ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ಕೊಡೋದಾಗಿ ಹೇಳಿದ್ದಾರೆ.ಸಂಯುಕ್ತಾರೆನ್ನ ಹಾಕಿಕೊಂಡು ಸಿನಿಮಾ ಮಾಡೋರಿಗೆ ತೊಂದರೆ ಆಗಲೇ ಬಾರದು ಅನ್ನೋ ಕಾರಣಕ್ಕೇನೆ ಈಗ ದೂರು ಕೊಡ್ತಿರೋದಾಗಿಯೂ ಪದ್ಮನಾಭ್ ಸ್ಪಷ್ಟ ಪಡಿಸಿದ್ದಾರೆ.

--