ಗೌರಿ ಲಂಕೇಶ್ ಹತ್ಯೆಯನ್ನು ಹೀನ ಕೃತ್ಯವೆಂದು ಬಣ್ಣಿಸಿರುವ ನಟ-ರಾಜಕಾರಣಿ ಪವನ್ ಕಲ್ಯಾಣ್, ಓರ್ವ ಗೌರಿಯನ್ನು ಕೊಂದರೆ ಲಕ್ಷ ಲಕ್ಷ ಗೌರಿಯರು ಹುಟ್ಟುತ್ತಾರೆ ಎಂದು ಹೇಳಿದ್ದಾರೆ. ಜನ ಸೇನಾ ಪಕ್ಷದ ಮುಖ್ಯಸ್ಥನಾಗಿರುವ ಪವನ್ ಕಲ್ಯಾಣ್, ಸಾಮಾಜಿಕ ಬದ್ದತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಪೆನ್ ಹಿಡಿದು ಹೋರಾಡುವ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲುವುದರಿಂದ ಅವರ ಅಭಿವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ, ಎಂದು ಸರಣಿ ಟ್ವೀಟ್’ಗಳ ಮೂಲಕ ಹೇಳಿದ್ದಾರೆ.
ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯನ್ನು ಹೀನ ಕೃತ್ಯವೆಂದು ಬಣ್ಣಿಸಿರುವ ನಟ-ರಾಜಕಾರಣಿ ಪವನ್ ಕಲ್ಯಾಣ್, ಓರ್ವ ಗೌರಿಯನ್ನು ಕೊಂದರೆ ಲಕ್ಷ ಲಕ್ಷ ಗೌರಿಯರು ಹುಟ್ಟುತ್ತಾರೆ ಎಂದು ಹೇಳಿದ್ದಾರೆ.
ಜನ ಸೇನಾ ಪಕ್ಷದ ಮುಖ್ಯಸ್ಥನಾಗಿರುವ ಪವನ್ ಕಲ್ಯಾಣ್, ಸಾಮಾಜಿಕ ಬದ್ದತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಪೆನ್ ಹಿಡಿದು ಹೋರಾಡುವ ವ್ಯಕ್ತಿಯನ್ನು ಗುಂಡಿಟ್ಟು ಕೊಲ್ಲುವುದರಿಂದ ಅವರ ಅಭಿವ್ಯಕ್ತಿಯನ್ನು ತಡೆಯಲು ಸಾಧ್ಯವಿಲ್ಲ, ಎಂದು ಸರಣಿ ಟ್ವೀಟ್’ಗಳ ಮೂಲಕ ಹೇಳಿದ್ದಾರೆ.
ವೈವಿಧ್ಯತೆ ಇರುವ ದೇಶದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಎಂದು ಹೇಳಿರುವ ಪವನ್ ಕಲ್ಯಾಣ್, ಓರ್ವ ಗೌರಿ ಲಂಕೇಶರನ್ನು ಹತ್ಯೆಗೈಯುವ ಮೂಲಕ ಲಕ್ಷ ಲಕ್ಷ ಗೌರಿ ಲಂಕೇಶರು ಹುಟ್ಟುತ್ತಾರೆ ಎಂದು ಹೇಳಿದ್ದಾರೆ.
ಆದರೆ ವಾಸ್ತವಾಂಶಗಳನ್ನು ತಿಳಿಯದೇ ಈ ಹತ್ಯೆಗಾಗಿ ಹಿಂದುತ್ವ ಶಕ್ತಿಗಳನ್ನು ನಾನು ದೂಷಿಸಲಾರೆ ಎಂದು ಕೂಡಾ ಅವರು ಹೇಳಿದ್ದಾರೆ.
ಕಳೆದ ಮಂಗಳವಾರ ಹಿರಿಯ ಪತ್ರಕರ್ತೆ ಹಾಗೂ ವಿಚಾರವಾದಿ ಗೌರಿ ಲಂಕೇಶರನ್ನು ದುಷ್ಕರ್ಮಿಗಳು ಅವರ ನಿವಾಸದ ಹೊರಗಡೆ ಗುಂಡಿಟ್ಟು ಹತ್ಯೆಗೈದಿದ್ದಾರೆ.
