ಬೆಳಗಾವಿ[ಮಾ. 12]  ಖಾನಾಪುರ ಕ್ಷೇತ್ರದ ಶಾಸಕಿ‌ ಡಾ.ಅಂಜಲಿ‌ ನಿಂಬಾಳ್ಕರ್ ಕಾರು ಅಪಘಾತಕ್ಕೆ ಗುರಿಯಾಗಿದ್ದು ಶಾಸಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರನ ರಾಜಾಸಾಬ್ ಫಾರ್ಮ್ ಹೌಸ್ ಬಳಿ ಅಪಘಾತ ನಡೆದಿದೆ. ಖಾನಾಪುರದಿಂದ‌ ನಾಂದೇಡ್ ಗೆ ಶಾಸಕಿ ಅಂಜಲಿ ತೆರಳುತ್ತಿದ್ದರು.

ಬಸ್​ ಚಾಲಕ, ನಿರ್ವಾಹಕನಿಗೆ ಶಾಸಕಿ ನಿಂಬಾಳ್ಕರ್ ಭರ್ಜರಿ ಕ್ಲಾಸ್!

ಮುಖಾಮುಖಿ ಡಿಕ್ಕಿ ತಪ್ಪಿಸಲು ಹೋಗಿ  ಕಾರು ಪಲ್ಟಿಯಾಗಿದೆ. ಸಕಾಲಕ್ಕೆ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಅಪಾಯ ಆಗಿಲ್ಲ.  ತಲೆ, ಕೈಗೆ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಾಲಕ ಮಹಾದೇವ ಹಾಗೂ ಗನ್ ಮ್ಯಾನ್ ಸೈಯದ್ ಗೂ ಗಾಯವಾಗಿದೆ.