ಕೆಲ ವಿದೇಶಿ ಕುಸ್ತಿಪಟುಗಳು ಕುಸ್ತಿ ಕೇಂದ್ರಕ್ಕೆ ನುಗ್ಗಿ ಪೀಠೊಪಕರಣಗಳನ್ನು ಹಾನಿ ಮಾಡಿದರು.
ಚಂಡೀಗಢ(ಅ.13): ಭಾರತದ ಖ್ಯಾತ ಕುಸ್ತಿಪಟು ದಿಲೀಪ್ ಸಿಂಗ್ ರಾಣಾ ಅಲಿಯಾಸ್ ಖಲಿ, ಗುರಗಾಂವ್‌ನಲ್ಲಿ ತಮ್ಮ ಕುಸ್ತಿ ತರಬೇತಿ ಕೇಂದ್ರದಲ್ಲಿ ಕುಸ್ತಿ ಚಾಂಪಿಯನ್ ಆಯೋಜಿಸಿದ್ದರು. ಇದಕ್ಕೆ ಕೆಲ ವಿದೇಶಿ ಕುಸ್ತಿಪಟುಗಳನ್ನೂ ಆಹ್ವಾನಿಸಲಾಗಿತ್ತು.
ಆದರೆ ಕುಸ್ತಿ ಪಂದ್ಯ ನಡೆಯಬೇಕಿದ್ದ ದಿನವೇ ಅಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿಗದಿಯಾಗಿದ್ದರಿಂದ ಪಂದ್ಯಗಳು ರದ್ದಾಗಿದ್ದವು. ಇದರಿಂದ ಕೆಲ ವಿದೇಶಿ ಕುಸ್ತಿಪಟುಗಳು ಕುಸ್ತಿ ಕೇಂದ್ರಕ್ಕೆ ನುಗ್ಗಿ ಪೀಠೊಪಕರಣಗಳನ್ನು ಹಾನಿ ಮಾಡಿದರು. ಇದರಿಂದ ಕೋಪಗೊಂಡ ಖಲಿ ಸೀದಾ ವಿದೇಶಿ ಕುಸ್ತಿಪಟುಗಳು ಇದ್ದ ಹೋಟೆಲ್‌ಗೆ ತೆರಳಿದ ಅಲ್ಲಿದ್ದ ಇಬ್ಬರು ಕುಸ್ತಿಪಟುಗಳಿಗೆ ಅವರ ಪ್ರೇಯಸಿಯ ಎದುರಿಗೆ ಚೆನ್ನಾಗಿ ತದುಕಿ ಬುದ್ಧಿ ಕಲಿಸಿದ್ದಾರೆ.
