ತಿರುವನಂತಪುರ[ಜು.5]  ತಮ್ಮ ಅಧಿಕೃತ ವಾಹನ ವೇಗ ಮಿತಿ  ಉಲ್ಲಂಘಿಸಿದ್ದಕ್ಕೆ ಕೇರಳ ರಾಜ್ಯಪಾಲರು 400 ರೂ. ದಂಡ ಪಾವತಿಸಿದ್ದಾರೆ. ಕೇರಳ ರಾಜ್ಯಪಾಲ ಪಿ ಸದಾಶಿವಂ ದಂಡ ಪಾವತಿಸಿದ್ದು ಮಾದರಿ ವರ್ತನೆ ತೋರಿದ್ದಾರೆ.

ಏಪ್ರಿಲ್‌ 7ರಂದು ರಾಜ್ಯಪಾಲರ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘನೆ ಮಾಡಿತ್ತು. ಆ ಕಾರಣಕ್ಕಾಗಿ ದಂಡ ಹೇರಲಾಗಿತ್ತು. ಈ ದಂಡ ಮೊತ್ತವನ್ನು ಪಾವತಿಸುವಂತೆ ರಾಜ್ಯಪಾಲರು ತನ್ನ ಕಾರ್ಯಾಲಯದ ಅಧಿಕಾರಿಗೆ ಸೂಚಿಸಿದ್ದರು.  

ನ್ಯಾಯಮೂರ್ತಿಯಾಗಿದ್ದ ಸದಾಶಿವಂ ಅವರು ಟ್ರಾಫಿಕ್‌ ನಿಯಮ ಉಲ್ಲಂಘನೆ  ವಾಹನದಲ್ಲಿ ಇರಲಿಲ್ಲ. ಕೇವಲ ಪ್ರಕರಣ ದಾಖಲಾಗಿದ್ದು ಸಂದೇಶ ರಾಜ್ಯಪಾಲರನ್ನು ತಲುಪಿತ್ತು.  ಹಾಗಿದ್ದರೂ ದಂಡ ಪಾವತಿಯ ಆದೇಶವನ್ನು ಪಾಲಿಸಿದ್ದಾರೆ.