‘ಕೆನಿತ್ ಜಸ್ಟರ್ ಅವರಿಗೆ ಆ ಸ್ಥಾನ ನಿಭಾಯಿಸುವ ಸಾಮರ್ಥ್ಯವಿರುವ ಕಾರಣ ಅವರನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ವರ್ಗಾವಣೆಯಾಗಲಿದ್ದಾರೆ,’

ವಾಷಿಂಗ್ಟನ್(ಜೂ.21): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಆಪ್ತರಾಗಿರುವ ಕೆನಿತ್ ಜಸ್ಟರ್(೬೫) ಅವರು ಭಾರತಕ್ಕೆ ಅಮೆರಿಕದ ನೂತನ ರಾಯಭಾರಿಯಾಗಿ ನೇಮಕವಾಗಲಿದ್ದಾರೆ ಎಂದು ಶ್ವೇತ ಭವನದ ಮೂಲಗಳು ತಿಳಿಸಿವೆ. ಈಗಾಗಲೇ ಅಂತಾರಾಷ್ಟ್ರೀಯ ಆರ್ಥಿಕ ವ್ಯವಹಾರಗಳ ಕುರಿತು ಡೊನಾಲ್ಡ್ ಟ್ರಂಪ್ ಅವರಿಗೆ ಉಪ ಸಲಹೆಗಾರ ಮತ್ತು ರಾಷ್ಟ್ರೀಯ ಆರ್ಥಿಕ ಮಂಡಳಿಯ ಉಪ ನಿರ್ದೇಶಕರಾಗಿರುವ ಕೆನಿತ್ ನಾಮ ನಿರ್ದೇಶನಗೊಂಡು, ಸೆನೆಟ್ ಖಚಿತಪಡಿಸಿದ್ದಲ್ಲಿ, ಕೆನಿತ್ ಅವರು ರಿಚರ್ಡ್ ವರ್ಮಾ ಅವರ ಸ್ಥಾನವನ್ನು ನಿಭಾಯಿಸಲಿದ್ದಾರೆ. ‘ಕೆನಿತ್ ಜಸ್ಟರ್ ಅವರಿಗೆ ಆ ಸ್ಥಾನ ನಿಭಾಯಿಸುವ ಸಾಮರ್ಥ್ಯವಿರುವ ಕಾರಣ ಅವರನ್ನು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿ ವರ್ಗಾವಣೆಯಾಗಲಿದ್ದಾರೆ,’ ಎಂದು ಶ್ವೇತಭವನದ ಉಪ ವಕ್ತಾರ ಲಿಂಡ್ಸೆ ಇ. ವಾಲ್ಟರ್ಸ್ ಹೇಳಿದ್ದಾರೆ. ಕೆನ್ ಅವರು ಶ್ವೇತಭವನದಲ್ಲಿರುವ ಪ್ರತಿಯೊಬ್ಬರೊಂದಿಗೂ ಉತ್ತಮ ಒಡನಾಟವನ್ನು ಹೊಂದಿದ್ದಾರೆ.