ನನಗೆ ಪೆನ್ ಖರೀದಿಸುವುದಕ್ಕೂ ಅಧಿಕಾವಿಲ್ಲ, ಜನರು ಏನೇ ಕೇಳುವುದಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೆಫ್ಟಿನೆಂಟ್ ಗೌರ್ನರ್ ನ್ನು ಪ್ರಶ್ನಿಸಲಿ ಎಂದು ಟ್ವೀಟ್​ ಮಾಡಿದ್ದರು.

ದೆಹಲಿ (ಸೆ.14): ದೆಹಲಿಯಲ್ಲಿ ಡೆಂಘೀ ಹಾಗೂ ಚಿಕನ್ ಗುನ್ಯಾ ತಾಂಡವವಾಡ್ತಿದೆ. ಈಗಾಗಲೇ 4 ಮಂದಿ ಸಾಂಕ್ರಾಮಿಕ ಕಾಯಿಲೆಗೆ ಸಾವನ್ನಪ್ಪಿದ್ದಾರೆ. ಆದ್ರೆ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸಿಎಂ ಕೇಜ್ರಿವಾಲ್​ ಪ್ರಧಾನಿಯನ್ನು ಕೇಳಿ ಎಂದಿದ್ದಾರೆ.

Add Asianetnews Kannada as a Preferred SourcegooglePreferred

ನನಗೆ ಪೆನ್ ಖರೀದಿಸುವುದಕ್ಕೂ ಅಧಿಕಾವಿಲ್ಲ, ಜನರು ಏನೇ ಕೇಳುವುದಿದ್ದರೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಲೆಫ್ಟಿನೆಂಟ್ ಗೌರ್ನರ್ ನ್ನು ಪ್ರಶ್ನಿಸಲಿ ಎಂದು ಟ್ವೀಟ್​ ಮಾಡಿದ್ದರು. ದೆಹಲಿ ಸಿಎಂ ಆಗಲಿ ಸಚಿವರಾಗಲಿ ಯಾವುದೇ ಆಪ್​ ಸಚಿವರೂ ಈ ಬಗ್ಗೆ ಗಮನ ಹರಿಸಿಲ್ಲ ಎಂದು ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಡೆಂಘೀ, ಚಿಕನ್ ಗುನ್ಯಾ ನಿಯಂತ್ರಿಸುವುದರಲ್ಲಿ ನಿಮ್ಮ ಜವಾಬ್ದಾರಿ ಇಲ್ಲವೆಂದಾದರೆ ರಾಜೀನಾಮೆ ನೀಡಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಹೇಳಿದ್ದಾರೆ. ದೆಹಲಿ ಸಿಎಂ ಹಾಗೂ ಅವರ ಸಚಿವರು ಕೇವಲ ಕುರುಕಲು ತಿಂಡಿಗಳಿಗಾಗಿ 546 ಕೋಟಿ ರೂ ಖರ್ಚು ಮಾಡುತ್ತಾರೆ. ಆದರೆ ಪೆನ್ ಖರೀದಿ ಮಾಡುವುದಕ್ಕೂ ತಮಗೆ ಅಧಿಕಾರ ಇಲ್ಲ ಎಂದು ಹೇಳುತ್ತಾರೆ ಎಂದು ಕುಟುಕಿದ್ದಾರೆ.