ಬೆಂಗಳೂರು( ಸೆ.20): ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಕರ್ನಾಟಕಕ್ಕೆ ಮತ್ತೆ ಭಾರೀ ಹಿನ್ನೆಡೆಯಾಗಿದೆ. ಈ ಬಗ್ಗೆ ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ.
ಮೇಲುಸ್ತುವಾರಿ ಸಮಿತಿ ನಿನ್ನೆ ಒಂದು ಆದೇಶ ನೀಡಿದೆ. ಸುಪ್ರೀಂಕೋರ್ಟ್ ಇವತ್ತು 6000 ಕ್ಯೂಸೆಕ್ ನೀರು ಬಿಡಲು ಹೇಳಿದೆ. ಅಲ್ಲದೆ ಕೇಂದ್ರಕ್ಕೆ ನಿರ್ವಹಣಾ ಮಂಡಳಿ ರಚಿಸುವಂತೆ ಆದೇಶಿಸಿದೆ. ಈ ಬಗ್ಗೆ
ನಾಳೆ ಕ್ಯಾಬಿನೆಟ್ನಲ್ಲಿ ಕಾನೂನು ಹೋರಾಟ ಮಾಡುವ ಕುರಿತು ಚರ್ಚಿಸುತ್ತೇನೆ. ನಾಳೆ ಸಂಜೆ 5 ಗಂಟೆಗೆ ವಿರೋಧ ಪಕ್ಷಗಳ ಜೊತೆ ಸಭೆ ನಡೆಸುತ್ತೇನೆ. ಹಾಗೂ ರಾಜ್ಯದ ಸಂಸದರ ಜೊತೆ ಮಾತುಕತೆ ನಡೆಸುತ್ತೇನೆ. ಸಭೆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಎಲ್ಲರೂ ಶಾಂತಿ ಕಾಪಾಡಬೇಕಿದೆ. ಆವೇಶಕ್ಕೆ, ಉದ್ವೇಗಕ್ಕೆ ಯಾರು ಒಳಗಾಗಬಾರದು. ಕಾವೇರಿ ಭಾಗದ ಎಲ್ಲ ಸಚಿವರ ಜೊತೆಗೂ ಚರ್ಚೆ ಮಾಡುತ್ತೇವೆ. ನಾಳೆ ಸಚಿವ ಸಂಪುಟದ ಸಭೆಯ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
