ತೆಲಂಗಾಣ-ಛತ್ತೀಸ್‌‌ಘಡ್‌‌ ನಕ್ಸಲ್ ಕಾರ್ಯಾಚರಣೆ: ಬೀದರ್ ಯೋಧ ಹುತಾತ್ಮ

Karnataka Soldier martyr at Naksal Operation
Highlights

ಬೀದರ್'ನ ಯೋಧ ಸುಶೀಲ್ ಕುಮಾರ್ ಹುತಾತ್ಮ ಯೋಧ. ನಕ್ಸಲ್ ನಿಗ್ರಹ ದಳದ ಕಮಾಂಡೋ'ಗಳು ತಡಪಲಗುಟ್ಟ-ಪೂಜಾರಿ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಕ್ಸ'ಲ್ ವಿರುದ್ಧ ಕೈಗೊಂಡ ದಾಳಿ ಕೈಗೊಂಡಿದ್ದರು.

ಬೀದರ್(ಮಾ.02): ತೆಲಂಗಾಣ-ಛತ್ತೀಸ್‌‌ಘಡ್‌‌ ಗಡಿಯಲ್ಲಿ ನಡೆದ ನಕ್ಸ'ಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಜ್ಯದ ಯೋಧನೊಬ್ಬ ಹುತಾತ್ಮನಾಗಿದ್ದಾನೆ.

ಬೀದರ್'ನ ಯೋಧ ಸುಶೀಲ್ ಕುಮಾರ್ ಹುತಾತ್ಮ ಯೋಧ. ನಕ್ಸಲ್ ನಿಗ್ರಹ ದಳದ ಕಮಾಂಡೋ'ಗಳು ತಡಪಲಗುಟ್ಟ-ಪೂಜಾರಿ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಕ್ಸ'ಲ್ ವಿರುದ್ಧ ಕೈಗೊಂಡ ದಾಳಿ ಕೈಗೊಂಡಿದ್ದರು. ಈ ಘರ್ಷಣೆಯಲ್ಲಿ 12 ಮಂದಿ ಮಾವೋಗಳು ಹತ್ಯೆಯಾಗಿದ್ದರು.

2004ರ ಬ್ಯಾಚ್'ನವರಾದ ಯೋಧ ಸುಶೀಲ್​ ಕುಮಾರ್ ಹುತಾತ್ಮರಾಗಿರುವುದು ಯೋಧನ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಹತ್ಯೆಯಾದವರಲ್ಲಿ ಸಿಪಿಐ ಮಾವೋದ ತೆಲಂಗಾಣ ರಾಜ್ಯ ಸಮಿತಿಯ ಕಾರ್ಯದರ್ಶಿ, ಕರೀಂ'ನಗರ ಜಿಲ್ಲಾ ವಿಭಾಗೀಯ ಸಮಿತಿ ಕಾರ್ಯದರ್ಶಿ ಸೇರಿದ್ದಾರೆ. ಉಳಿದವರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ. ಕಳೆದ 3 ದಿನಗಳಿಂದ 150ಕ್ಕೂ ಹೆಚ್ಚು ಮಾವೂ ಉಗ್ರರು ಸಭೆ ಸೇರಿದ್ದಾರೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿತ್ತು.

loader