ರಾಯಚೂರು[ಮಾ. 07]   ಇನ್ನು ನಡೆಯುತ್ತಿದಿಯಾ ಬಿಜೆಪಿ  ಆಪರೇಷನ್ ಕಮಲ? ಎಂಬ ಪ್ರಶ್ನೆ ಉದ್ಭವಿಸುವ ಬೆಳವಣಿಗೆಗಳು ನಡೆದಿವೆ. ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ ಮನೆಗೆ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಭೇಟಿ ನೀಡಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಲಿಂಗಸುಗೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಎಸ್. ಹೂಲಗೇರಿ ನಿವಾಸದಲ್ಲಿ ಗೌಪ್ಯ ಮಾತುಕತೆ ನಡೆದಿದೆ. ಕಾರ್ಯಕರ್ತರನ್ನು ಮನೆಯಿಂದ ಹೊರಗಡೆ ಕಳುಹಿಸಿ ಶಾಸಕರಿಬ್ಬರು ಮಾತುಕತೆ ನಡೆಸಿದ್ದಾರೆ. ಸುಮಾರು 10 ನಿಮಿಷಗಳ ಕಾಲ ಗೌಪ್ಯ ಮಾತುಕತೆ ನಡೆದಿದೆ.

ಕಲಬುರಗಿಗೆ ಬಂದು ಖರ್ಗೆ ಬಗ್ಗೆ ಚಕಾರವೆತ್ತದ ಮೋದಿ; ಕಾರಣ ನೋಡಿ!

ಈ ಹಿಂದೆ ದೇವದುರ್ಗ ಐಬಿ ಯಲ್ಲಿ ಶಿವನಗೌಡ ನಾಯಕ್ ಇದ್ದರು ಎನ್ನಲಾದ ಆಪರೇಷನ್ ಕಮಲ ಆಡಿಯೋ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಶಾಸಕರಿಬ್ಬರ ದಿಢೀರ್ ಭೇಟಿಯಿಂದ ಕಾರ್ಯಕರ್ತರಲ್ಲಿ ಆಪರೇಷನ್ ಕಮಲದ ಅನುಮಾನ ಸಹಜವಾಗಿಯೇ ಮೂಡಿದೆ.