ಬೆಂಗಳೂರು[ಆ. 20]  ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ 17 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಧಾರವಾಡದ ಜಗದೀಶ್ ಶೆಟ್ಟರ್ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ತೆಗೆದುಕೊಂಡಿದ್ದಾರೆ. ಜತೆಗೆ ದಾಖಲೆಯೊಂದನ್ನು ಬರೆದಿದ್ದಾರೆ.

ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲ ಸಾರಿ ಮಾಜಿ ಸಿಎಂ ಒಬ್ಬರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ತೆಗೆದುಕೊಂಡು ಕೆಲಸ ಮಾಡಲಿದ್ದಾರೆ.

ಬಿಎಸ್‌ವೈ ಸೇನೆ: ಯಾವ ಜಿಲ್ಲೆಗೆ ದಕ್ಕಿಲ್ಲ ಮಂತ್ರಿ ಭಾಗ್ಯ?

2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿದಾಗ ನಂತರ ಬದಲಾದ ರಾಜಕಾರಣದ ವಾತಾವರಣದಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಲಗಿಳಿದ ಮೇಲೆ ಸದಾನಂದ ಗೌಡ ಸಿಎಂ ಆದರು. ಇದಾದ ಮೇಲೆ ಮತ್ತೆ ರಾಜಕಾರಣದ ಗೊಂದಲ ಉಂಟಾದಾಗ ಜಗದೀಶ್ ಶೆಟ್ಟರ್ ಸಿಎಂ ಆದರು.

ಬಿಎಸ್ ಯಡಿಯೂರಪ್ಪ ನಮ್ಮ ಪರಮೋಚ್ಛ ನಾಯಕರು ಅವರ ಅಡಿಯಲ್ಲಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಶೆಟ್ಟರ್ ಹಿಂದೊಮ್ಮೆ ಹೇಳಿದ್ದರು. ಅದರಂತೆ ಇದೀಗ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ.  ಪಕ್ಕದ ತಮಿಳುನಾಡಿನಲ್ಲಿ ಈ ರೀತಿ ಮಾಜಿ ಸಿಎಂ ಆಗಿದ್ದವರು ಮತ್ತೆ ಸಚಿವರಾದ ಉದಾಹರಣೆ ಇದೆ.