ಬೆಂಗಳೂರು (ಜು.08): ರಾಜ್ಯದಲ್ಲಿ ಶಾಸಕರ ರಾಜೀನಾಮೆ ಪರ್ವ ಮುಂದುವರಿದ ಬೆನ್ನಲ್ಲೇ ಮತ್ತೊಬ್ಬ ಜೆಡಿಎಸ್ ಶಾಸಕ ಮುಂಬೈ ಕಡೆ ಮುಖ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆ ಬಗ್ಗೆ ಖುದ್ದು ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದು, ಆ ವಿಚಾರವನ್ನು ಅಲ್ಲಗಳೆದರು.

"

ನನಗೆ ಕ್ಷೇತ್ರದಲ್ಲಿ ಸ್ವಲ್ಪ ಕೆಲಸ ಇದೆ ಅದು ಮುಗಿಸಬೇಕು, ಆ ನಂತರ ನಾನು ರೆಸಾರ್ಟ್‌ಗೆ ಹೋಗಿ ಜೆಡಿಎಸ್ ಶಾಸಕರನ್ನು ಸೇರ್ತೀನಿ ಎಂದು ಹೇಳಿದರು.

ಇದನ್ನೂ ಓದಿ | ಮೈತ್ರಿಗೆ ಮತ್ತೊಂದು ಶಾಕ್! ಸದ್ದಿಲ್ಲದೇ ಮುಂಬೈ ಸೇರಿದ ಮತ್ತೊಬ್ಬ ಶಾಸಕ!

ನಾನು ರಾಜೀನಾಮೆ ಕೊಡಲ್ಲ, ಮುಂಬೈಗೆ ಹೋಗಲ್ಲ, ಮುಂಬೈ ಹೇಗಿದೆ ಅಂತಾನೂ ನಾನು ನೋಡಿಲ್ಲ, ಅನುಮತಿ ಪಡೆದು ನಾನು ಬೇಲೂರಿಗೆ ಹೋಗ್ತಿದಿನಿ, ಬಳಿಕ ಮಡಿಕೇರಿಗೆ ತೆರಳಿ ಜೆಡಿಎಸ್ ಶಾಸಕರ ಜೊತೆ ನಾನು ರೆಸಾರ್ಟ್‌ನಲ್ಲಿ ಇರ್ತೇನೆ, ಎಂದರು.

ಜೆಡಿಎಸ್ ನನಗೆ ಎಲ್ಲಾ ಕೊಟ್ಟಿದೆ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.