ಬೆಂಗಳೂರು [ಜು.17] : ರಾಜ್ಯ ರಾಜ್ಯಕೀಯದಲ್ಲಿ ಪ್ರಹಸನ ನಡೆಯುತ್ತಿದೆ.  ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆ ಬಳಿಕ ಮಹತ್ವದ ತೀರ್ಪು ಪ್ರಕಟ ಮಾಡಿದೆ. ಈ ತೀರ್ಪನ್ನು ತಾವು ಸ್ವಾಗತ ಮಾಡುವುದಾಗಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ರಾಜೀನಾಮೆ ನೀಡಿದಾಗ ಸ್ಪೀಕರ್ ಯಾವ ನಿಲುವು ತೆಗೆದುಕೊಳ್ಳಬೇಕು ಎನ್ನುವುದನ್ನು ಸುಪ್ರೀಂಕೋರ್ಟ್ ಹೇಳಿದೆ. ಶಾಸಕರು ವಿಶ್ವಾಸಮತಕ್ಕೆ ಹಾಜರಾಗಲು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದೆ. ಇನ್ನು ವಿಪ್ ಜಾರಿ ಮಾಡುವಂತದ್ದು ಇಲ್ಲ ಎಂದು ಶೆಟ್ಟರ್ ಹೇಳಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ರಾಜಕೀಯ ವಿದ್ಯಮಾನದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಮುಂದಿನ ನಿರ್ಧಾರ ಮಾನ್ಯ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಬಿಟ್ಟಿದ್ದು.  ಸ್ಪೀಕರ್ ಈಗ ಸೂಕ್ಷ್ಮವಾಗಿಯೇ ನಿರ್ಧಾರ ಕೈಗೊಳ್ಳಬೇಕು ಎಂದು ಶೆಟ್ಟರ್ ಹೇಳಿದರು. 

15 ಶಾಸಕರು ಅಸಮಾಧಾನಗೊಂಡು ರಾಜೀನಾಮೆ ನೀಡಿ ಹೊರಬಂದಾಗಲೇ ಸಿಎಂ ರಾಜೀನಾಮೆ ನೀಡಬೇಕಿತ್ತು. ಇಲ್ಲಿಯವರೆಗೂ ಕೂಡ ಅರಾಜಕತೆ ಸೃಷ್ಟಿ ಮಾಡುವ ಅಗತ್ಯ ಇರಲಿಲ್ಲ ಎಂದು ಶೆಟ್ಟರ್ ಹೇಳಿದರು.