ಬೆಂಗಳೂರು[ಜು. 23] ವಿಶ್ವಾಸ ಮತ ಯಾಚನೆ ಮಾಡಿದ ಸಿಎಂ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಬಿಜೆಪಿ ಪರ 105 ಮತ ಚಲಾವಣೆಯಾಗಿದ್ದರೆ ದೋಸ್ತಿಗಳ ಪರ 99 ಮತಗಳು ಬಿದ್ದು ಸರ್ಕಾರ ವಿಶ್ವಾಸ ಕಳೆದುಕೊಂಡಿದೆ.

ಅಧಿಕಾರದ ನಂಬರ್ ಗೇಮ್ ಮುಕ್ತಾಯವಾಗಿಲ್ಲ, ಇನ್ನೂ ಇದೆ..! ಯಡಿಯೂರಪ್ಪ ಸಿಎಂ ಆಗುತ್ತಿದ್ದಂತೆ ಅಗ್ನಿಪರೀಕ್ಷೆ ಪಾಸಾಗಬೇಕಿದೆ..! ಇವತ್ತು ಗೈರು ಹಾಜರಾದವರೆಲ್ಲ, ಅವತ್ತೂ ಗೈರು ಹಾಜರಾದರೆ ಮಾತ್ರ ಬಿಎಸ್ವೈ ಪಾಸ್ ಆಗ್ತಾರೆ.

‘ನಾನು ತಪ್ಪು ಮಾಡಿದ್ದೇನೆ, ತಿದ್ದಿಕೊಳ್ಳಲು ಆಕೆ ಸಮಯ ನೀಡಿದಳು’

ಬಿಎಸ್ವೈ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಹುಮತ ಸಾಬೀತುಪಡಿಸಬೇಕು ಬಹುಮತ ಸಾಬೀತು ಪಡಿಸಲು ಅವರಿಗೂ ಮ್ಯಾಜಿಕ್ ನಂಬರ್ ಬೆಂಬಲ ಬೇಕು ಈಗ ಗೈರು ಹಾಜರಾಗಿರೋ ಅತೃಪ್ತರು ಆ ದಿನವೂ ಗೈರು ಹಾಜರಾಗಬೇಕು ಕಾರಣ ಅತೃಪ್ತರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ.

ಬಿಎಸ್ವೈ ಬಹುಮತ ಸಾಬೀತು ಪಡಿಸೋ ದಿನ ಅವರು ಹಾಜರಾದರೆ  ಮತ್ತೆ ಸಂಕಷ್ಟ ಎದುರಾಗಲಿದೆ. ಅತೃಪ್ತರು ಹಾಜರಾಗಿ, ಬಿಎಸ್ವೈ ಪರ ಮತ ಚಲಾಯಿಸುವುದು ಕಷ್ಟವಾಗಲಿದೆ ಹಾಜರಾಗಿ ಬಿಎಸ್ವೈ ಪರ ಮತ ಚಲಾಯಿಸಿದ್ರೆ ಅನರ್ಹತೆ ಸುಲಭವಾಗಲಿದೆ.

ಹೊಸ ಸಿಎಂ ಬಂದಂತೆ ಹೊಸ ಸ್ಪೀಕರ್ ಆಯ್ಕೆಯೂ ನಡೆಯಬೇಕು ಬಹುಮತ ಸಾಬೀತಿನ ನಂತರ ಹೊಸ ಸ್ಪೀಕರ್ ಬರುತ್ತಾರೋ..? ಬಹುಮತ ಸಾಬೀತಿನ ವೇಳೆಯೇ ಹೊಸ ಸ್ಪೀಕರ್ ಬರಬೇಕೋ..? ಈ ಎಲ್ಲವನ್ನೂ ಸುಗಮಗೊಳಿಸಲು ಬಿಜೆಪಿ ಸಿದ್ಧ ಮಾಡಿದೆ.