ನೃತ್ಯಗಾರರು, ಕಲಾವಿದರಿಗೆ ಸ್ಪೀಕರ್‌| ಅವಮಾನ ಮಾಡಿದ್ದಾರೆ: ಶೋಭಾ| ನೃತ್ಯಗಾರ್ತಿ ಅಲ್ಲ ಎಂಬ ಹೇಳಿಕೆಗೆ ಕ್ಷಮೆ ಕೇಳಲಿ

ಬೆಂಗಳೂರು[ಜು.16]: ಸಂವಿಧಾನಬದ್ಧ ಪೀಠದಲ್ಲಿ ಕುಳಿತು ಮಹಿಳೆಯರು ಮತ್ತು ಕಲಾವಿದರ ಬಗ್ಗೆ ಲಘುವಾಗಿ ಮಾತನಾಡುವ ವಿಧಾನಸಭೆಯ ಸ್ಪೀಕರ್‌ ಕಾಂಗ್ರೆಸ್‌ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಕಟುವಾಗಿ ಟೀಕಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್‌ ಕೂರುವ ಪೀಠದ ನೆತ್ತಿ ಮೇಲೆ ರಾಷ್ಟ್ರದ ಲಾಂಛನವಿರುತ್ತದೆ. ಆ ಗೌರವಕ್ಕೆ ತಕ್ಕಂತೆ ಅವರು ನಡೆದುಕೊಳ್ಳಬೇಕು. ತಕ್ಷಣವೇ ಅವರು ನೃತ್ಯಗಾರರು ಹಾಗೂ ಕಲಾವಿದರಲ್ಲಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

'ಯಾರನ್ನೋ ಖುಷಿ ಪಡಿಸಲು ನಾನು ಡಾನ್ಸರ್ ಅಲ್ಲ'

ಸ್ಪೀಕರ್‌ ಪೀಠದಲ್ಲಿ ಕುಳಿತು ಎರಡ್ಮೂರು ಬಾರಿ ಅಸಂವಿಧಾನಾತ್ಮಕ ಪದ ಬಳಸಿದ್ದಾರೆ. ಈಗ ವೇಶ್ಯೆಯರ ಬಗ್ಗೆ ಲಘುವಾಗಿ ಮಾತನಾಡಿದ್ದರು. ಇದೀಗ ತಾವು ನೃತ್ಯಗಾರ್ತಿ ಅಲ್ಲ ಎಂದು ಹಗುರವಾಗಿ ಹೇಳಿಕೆ ನೀಡುವ ಮೂಲಕ ನೃತ್ಯಗಾರರಿಗೆ, ಯಕ್ಷಗಾನ ಹಾಗೂ ಭರತನಾಟ್ಯ ಕಲಾವಿದರಿಗೆ ಅವಮಾನಿಸಿದ್ದಾರೆ ಎಂದು ಕಿಡಿಕಾರಿದರು.

ದೇಶದಲ್ಲಿ ಭರತ ನಾಟ್ಯ, ಯಕ್ಷಗಾನ ಹಾಗೂ ಕಥಕ್ಕಳಿ ಕಲಾವಿದರು ತಮ್ಮ ಕಲಾ ಪ್ರತಿಭೆ ಮೂಲಕ ದೇವರನ್ನು ಒಲಿಸಿಕೊಂಡವರಿದ್ದಾರೆ. ಈ ನೃತ್ಯದ ಬಗ್ಗೆ ಅವಹೇಳನಕಾರಿಯಾಗಿ ಆ ಪೀಠದಲ್ಲಿ ಕುಳಿತು ಮಾತನಾಡುತ್ತಿರೋದು ಮಾನಸಿಕತೆಯನ್ನು ತೋರಿಸುತ್ತದೆ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೇವಲ ಒಂದೇ ವರ್ಷದ ಅವಧಿಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಮಹಾಘಟಬಂಧನ್‌ ವೈಫಲ್ಯವನ್ನು ಕಂಡಿದೆ. ರಾಜ್ಯದ ಜನರು ಮತ್ತು ಶಾಸಕರ ವಿಶ್ವಾಸ ಕಳೆದುಕೊಂಡಿರುವ ಮುಖ್ಯಮಂತ್ರಿಗಳಿಗೆ ರಾಜೀನಾಮೆ ನೀಡುವುದು ಒಂದೇ ದಾರಿ. ಅವರು ಪದ ತ್ಯಾಗ ಮಾಡಿ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕು. ಇದು ಜನರ ಮತ್ತು ಶಾಸಕರ ಅಗ್ರಹವಾಗಿದೆ ಎಂದರು.