ಬೆಂಗಳೂರು[ಜು.12]: ರಾಜ್ಯ ರಾಜಕೀಯ ಪ್ರಹಸನ ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಒಂದೆಡೆ ದೋಸ್ತಿ ನಾಯಕರು ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ವಿಪ್ ಜಾರಿಗೊಳಿಸಿ ಕರೆ ತರುವ ಯತ್ನ ನಡೆಸುತ್ತಿದ್ದರೆ, ಮತ್ತೊಂದೆಡೆ ಸುಪ್ರೀಂ ಕೋರ್ಟ್ ಹಾಗೂ ವಿಧಾನಸಭಾ ಸ್ಪೀಕರ್ ನಡುವಿನ ತಿಕ್ಕಾಟ ಭಾರೀ ಚರ್ಚೆ ಮಾಡುತ್ತಿದೆ. ಹೀಗಿರುವಾಗ ಸ್ಪೀಕರ್ ರಮೇಶ್ ಕುಮಾರ್ ಈ ರಾಜಕೀಯ ಪ್ರಹಸನದ ಕುರಿತು ಪ್ರತಿಕ್ರಿಯಿಸುತ್ತಾ 'ಯಾರನ್ನೋ ಖುಷಿಪಡಿಸಲು ಡ್ಯಾನ್ಸ್ ಮಾಡಲು ನಾನು ನೃತ್ಯಗಾರ್ತಿ ಅಲ್ಲ' ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.

ಹೌದು ಅತೃಪ್ತ ಶಾಸಕರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್ ರಮೇಶ್ ಕುಮಾರ್ 'ಜನರ ನೋವಿಗೆ ಗೌರವ ಕೊಡುವುದು ನನ್ನ ಕರ್ತವ್ಯ.ಸಂವಿಧಾನ ಹೇಳಿರುವುದಕ್ಕೆ ಅಪಚಾರ ಮಾಡುವುದಿಲ್ಲ, ಸಂವಿಧಾನ ಮೀರಿ ನಾನು ಕೆಲಸ ಮಾಡಲ್ಲ, ಸಂವಿಧಾನದ ಮೇಲೆ ನಾನು ಅತ್ಯಾಚಾರ ಮಾಡಲ್ಲ. ಯಾರನ್ನೋ ಖುಷಿಪಡಿಸಲು, ದುಃಖಪಡಿಸಲು ನನ್ನಿಂದಾಗದು. ಯಾರನ್ನೋ ಖುಷಿಪಡಿಸಲು ಡ್ಯಾನ್ಸ್ ಮಾಡಲು ನಾನು ನೃತ್ಯಗಾರ್ತಿ ಅಲ್ಲ' ಎಂದು ಖಾರವಾಗೇ ಉತ್ತರಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಪ್ರೀಂ ಕೋರ್ಟ್ ತೀರ್ಪಿನ ಕುರಿತಾಗಿ ಮಾತನಾಡಿರುವ ಸ್ಪೀಕರ್ 'ಸುಪ್ರೀಂಕೋರ್ಟ್ ತೀರ್ಪು ಏನು ಬರುತ್ತೋ ನೋಡೋಣ. ಅನ್ವಯವಾಗುವುದಿದ್ದರೆ ತೀರ್ಪು ಪರಿಪಾಲನೆ ಮಾಡೋಣ. ತಪ್ಪು ತಿಳಿವಳಿಕೆ ಇದ್ದರೆ ಸುಪ್ರೀಂಕೋರ್ಟ್ನಿಂದ ವಿವರಣೆ ಕೇಳೋಣ. ದೇಶ ಉಳಿಯಬೇಕು, ನ್ಯಾಯಾಂಗ, ಶಾಸಕಾಂಗ ಉಳಿಯಬೇಕು. ಕ್ರಮಬದ್ಧವಾಗಿಲ್ಲದ ಕಾರಣ ನಿನ್ನೆ ಶಾಸಕರು ಮತ್ತೊಂದು ರಾಜೀನಾಮೆ ಸಲ್ಲಿಸಿದ್ದಾರೆ. 
ಶಾಸಕರ ಅನರ್ಹತೆ ಬಗ್ಗೆ ನನಗೆ ಗೊತ್ತಿಲ್ಲ' ಎಂದಿದ್ದಾರೆ.

ಒಟ್ಟಾರೆಯಾಗೊ ರಾಜಗಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿವೆ. ಇವೆಲ್ಲದರ ನಡುವೆ ಇಂದು ಶಾಸಕಾಂಗ ಸಭೆ ನಡೆಯಲಿದ್ದು, ಇದಕ್ಕೆ ಹಾಜರಾಗುವಂತೆ ವಿಪ್ ಕೂಡಾ ಜಾರಿಗೊಳಿಸಲಾಗಿದೆ. ಹೀಗಿರುವಾಗ ಅತೃಪ್ತ ಶಾಸಕರ ಮುಂದಿನ ನಡೆ ಏನಿರುತ್ತೆ? ವಪ್ ಗೆ ಹೆದರಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರಾ ಅಥವಾ ಹಠ ಮುಂದುವರೆಸಿ ರಾಜಕೀಯ ಭವಿಷ್ಯಕ್ಕೆ ಕೊಡಲಿಯೇಟು ಹಾಕುತ್ತಾ ಎಂಬುವುದಕ್ಕೆ ಕಾಲವೇ ಉತ್ತರಿಸಲಿದೆ.